ಕರ್ನಾಟಕ

karnataka

ETV Bharat / sitara

ವಾರ್ಷಿಕೋತ್ಸವಕ್ಕೂ ಮುನ್ನವೇ ನಿಕ್​ಗೆ ನಾಯಿ ಗಿಫ್ಟ್​ ಕೊಟ್ಟ ಪಿಗ್ಗಿ - ಪ್ರಿಯಾಂಕಾ ಛೋಪ್ರಾ ಉಡುಗೊರೆ

ಪತಿ ನಿಕ್​ ಜಾನ್ಸ್​​ಗೆ ನಾಯೊಂದನ್ನು ಗಿಫ್ಟ್​ ಆಗಿ ಕೊಟ್ಟಿರುವ ಪ್ರಿಯಾಂಕಾ ಈ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

piggi gift
piggi gift

By

Published : Nov 27, 2019, 10:55 AM IST

Updated : Nov 27, 2019, 3:12 PM IST

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾ ಅವರು ತಮ್ಮ ಪತಿ ನಿಕ್​ ಜಾನ್ಸ್​​ಗೆ ಮದುವೆ ವಾರ್ಷಿಕೋತ್ಸವಕ್ಕೂ ಮುನ್ನವೇ ಒಂದು ಪ್ರಿಯವಾದ ಗಿಫ್ಟ್​ ಕೊಟ್ಟಿದ್ದಾರೆ.

ನಾಯಿಯೊಂದನ್ನು ಗಿಫ್ಟ್​ ಆಗಿ ಕೊಟ್ಟಿರುವ ಪ್ರಿಯಾಂಕಾ ಈ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ನಿಕ್​ ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ನಾಯಿಯನ್ನು ಅವರ​ ಮೇಲೆ ಬಿಟ್ಟಿರುವ ಪಿಗ್ಗಿ ಒಂದೇ ಫ್ರೇಮ್​​ನಲ್ಲಿ ಇಬ್ಬರೂ ಕ್ಯೂಟ್​ ಆಗಿ ಕಾಣ್ತಿದ್ದಾರೆ ಎಂದು ಬರೆದಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಿಕ್​​ ಜೋನ್ಸ್​, ಇವತ್ತು ಬೆಳಗ್ಗೆ ಪ್ರಿಯಾಂಕಾ ಒಂದು ಸರ್​ಪ್ರೈಸ್​ ಜೊತೆಗೆ ಮನೆಗೆ ಬಂದಳು. ಇವನ ಹೆಸರು ಪಬ್​ ಜಿನೊ, ನಮ್ಮನೆಗೆ ಹೊಸದಾಗಿ ಬಂದ ಅತಿಥಿ ಎಂದು ಪೊಸ್ಟ್​ ಮಾಡಿದ್ದಾರೆ.

Last Updated : Nov 27, 2019, 3:12 PM IST

ABOUT THE AUTHOR

...view details