ಹಾಲಿವುಡ್ ಹಾಟ್ ಜೋಡಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ನಡುವಿನ ಅನುಬಂಧ ದಿನೇ ದಿನೆ ಇನ್ನಷ್ಟು ಹತ್ತಿರವಾಗುತ್ತಿದೆ. ಇದೀಗ ಅವರ ನಿಶ್ಚಿತಾರ್ಥ ದಿನದ ಸುಮಧುರ ಕ್ಷಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ನಿಶ್ಚಿತಾರ್ಥ ದಿನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪ್ರಿಯಾಂಕಾ - ನಿಕ್ - ಪ್ರಿಯಾಂಕಾ ಚೋಪ್ರಾ
ಹಾಲಿವುಡ್ ಹಾಟ್ ಜೋಡಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ನಿಶ್ಚಿತಾರ್ಥ ದಿನದ ಸುಮಧುರ ಕ್ಷಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕಾ-ನಿಕ್
ಪ್ರಿಯಾಂಕಾ-ನಿಕ್
ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೊತೆಗೆ ತಮ್ಮ ಎಂಗೇಜ್ಮೆಂಟ್ ರಿಂಗ್ ಪ್ರದರ್ಶಿಸಿ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದರೆ, ಎಂಗೇಜ್ಮೆಂಟ್ ನಂತರ ಬೀಜ್ ಬಳಿ ಜೊತೆಗೆ ಊಟ ಮಾಡಿರುವ ಫೋಟೋವನ್ನು ನಿಕ್ ಜೋನಾಸ್ ಶೇರ್ ಮಾಡಿದ್ದಾರೆ. ಇದೀಗ ನಮ್ಮ ಈ ಸಂಬಂಧಕ್ಕೆ (ಎಂಗೇಜ್ಮೆಂಟ್) 3 ವರ್ಷಗಳು ತುಂಬಿದ್ದು, ಬಹಳಾನೇ ಸ್ಪೆಷಲ್ ಎಂಬರ್ಥದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನೂ ಜುಲೈ 18ರಂದು ಪ್ರಿಯಾಂಕಾ ಚೋಪ್ರಾ 39ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಪತಿಯಿಂದ ವಿಶೇಷ ಉಡುಗೊರೆ ಪಡೆದಿದ್ದರು.