ಹೈದರಾಬಾದ್: 2020 ರಲ್ಲಿ ತಾಪ್ಸೀ ಪನ್ನು ಅಭಿನಯದ ಥಪ್ಪಾಡ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬಾಲಿವುಡ್ ನಟಿ ದಿಯಾ ಮಿರ್ಜಾ ತಾನು ತಾಯಿ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
'ಅಮ್ಮ'ನಾಗುವ ಖುಷಿಯಲ್ಲಿ ನಟಿ ದಿಯಾ ಮಿರ್ಜಾ: ಬಾಲಿವುಡ್ ಗಣ್ಯರಿಂದ ಶುಭಾಶಯ - ನಟಿ ಕರೀಷ್ಮಾ ಕಪೂರ್
ಬಾಲಿವುಡ್ ನಟಿ ದಿಯಾ ಮಿರ್ಜಾ ತಾನು ತಾಯಿಯಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದು, ಚಿತ್ರರಂಗದ ಗಣ್ಯರು ಶುಭಾಶಯ ತಿಳಿಸಿದ್ದಾರೆ.
ಇನ್ನು ಈ ಪೋಸ್ಟ್ಗೆ ಇತರ ಸೆಲೆಬ್ರಿಟಿಗಳು ಮೆಚ್ಚುಗೆಯ ಜೊತೆಗೆ ಶುಭಹಾರೈಸಿದ್ದಾರೆ. ನಟಿ ಕರೀಷ್ಮಾ ಕಪೂರ್ ಕಮೆಂಟ್ ಮಾಡಿದ್ದು, "ಅಭಿನಂದನೆಗಳು ದಿಯಾ" ಎಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ದಿಯಾ ಅವರ ಪೋಸ್ಟ್ ಬಗ್ಗೆ ಕಮೆಂಟ್ ಮಾಡಿದ್ದು, "OMG.. ಅಭಿನಂದನೆಗಳು ದಿಯಾ" ಎಂದು ಬರೆದಿದ್ದಾರೆ. ಇನ್ನು ತಾಯ್ತನದ ಸಂತೋಷವನ್ನು ಅನುಭವಿಸುತ್ತಿರುವ ಅನುಷ್ಕಾ ಶರ್ಮಾ ಕೂಡ ದಿಯಾಗೆ "ನನ್ನ ಪ್ರೀತಿಯ ಅಭಿನಂದನೆಗಳು ♥" "ಎಂದು ಹೇಳಿದ್ದಾರೆ.
ದಿಯಾ ಮಿರ್ಜಾ ಫೆಬ್ರವರಿ 2021ರಲ್ಲಿ ಮುಂಬೈ ಮೂಲದ ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾದರು. ಅವರು ಇತ್ತೀಚೆಗೆ ತನ್ನ ಪತಿ ಜೊತೆ ಮಾಲ್ಡೀವ್ಸ್ಗೆ ತೆರಳಿದ್ದರು.