ಕರ್ನಾಟಕ

karnataka

ETV Bharat / sitara

ಸಲ್ಲು ಭಾಯ್​ ಜೊತೆ ಪ್ರೇಮ್​: ಬಾಲಿವುಡ್​ನಲ್ಲಿ ನಟಿಸ್ತಾರಾ ಕನ್ನಡದ ಸ್ಟಾರ್​ ನಿರ್ದೇಶಕ!? - undefined

ಬಾಲಿವುಡ್‌ನ ದಬಾಂಗ್‌ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಸುದೀಪ್ ನಟಿಸುತ್ತಿದ್ದು, ಇದೀಗ ನಿರ್ದೇಶಕ ಪ್ರೇಮ್‌ ಕೂಡ ನಟನೆ ಮಾಡಲಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ. ಅದಕ್ಕೆ ಕಾರಣವಾಗಿದ್ದು,ಸಲ್ಮಾನ್​ ಜೊತೆಗಿರುವ ಫೋಟೋ.

ಸಲ್ಲು ಭಾಯ್​ ಜೊತೆ ಪ್ರೇಮ್​

By

Published : May 7, 2019, 5:09 AM IST


ಬಾಲಿವುಡ್‌ನ ದಬಾಂಗ್‌ 3 ಚಿತ್ರದಲ್ಲಿ ಸ್ಟಾರ್​ ನಟ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ತೆರೆ ಹಂಚಿಕೊಳ್ಳುತ್ತಿದ್ದು, ಈಗಾಗಲೇ ಮುಂಬೈನಲ್ಲಿ ಶೂಟಿಂಗ್ ಭರದಿಂದ ಸಾಗಿದೆ.

ನಟ ಸುದೀಪ್​ ಈಗಾಗಲೇ ಚಿತ್ರತಂಡ ಸೇರಿಕೊಂಡಿದ್ದು, ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ಜಿಮ್‍ನಲ್ಲಿ ತಾವು ತೆಗೆಸಿಕೊಂಡಿದ್ದ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿ ಥ್ಯಾಂಕ್ಸ್ ಹೇಳಿದ್ದು ಸಖತ್ ವೈರಲ್ ಆಗಿತ್ತು. ಇದೀಗ ಸಲ್ಮಾನ್ ಖಾನ್ ಜೊತೆ ನಿರ್ದೇಶಕ ಪ್ರೇಮ್‌ ಇರುವ ಫೋಟೋ ರಿವೀಲ್ ಆಗಿದೆ.

ಅಷ್ಟಕ್ಕೂ ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ಮಧ್ಯೆ ಪ್ರೇಮ್​ ಏನು ಮಾಡ್ತಾ ಇದ್ದಾರೆ ಅನ್ನೋದು ಕುತೂಹಲ. ಆದರೆ ಕಿಚ್ಚ ಸುದೀಪ್ ನಿರ್ದೇಶಕ ಪ್ರೇಮ್​ನನ್ನು ಮುಂಬೈನ ಶೂಟಿಂಗ್ ಸೆಟ್​ಗೆ ಕರೆದುಕೊಂಡು ಹೋಗಿದ್ದಾರೆ. ಆಗ ಸಲ್ಮಾನ್ ಖಾನ್ ಜೊತೆ ಪ್ರೇಮ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಜೊತೆ ನಿರ್ದೇಶಕ ಪ್ರೇಮ್ ಕಾಣಿಸಿಕೊಂಡ ಪೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಭುದೇವ ನಿರ್ದೇಶನದ ದಬಾಂಗ್‌ 3 ಚಿತ್ರದಲ್ಲಿ, ಸುದೀಪ್ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಈ ಪಾತ್ರಕ್ಕೆ ಹೀರೋ ಪಾತ್ರಕ್ಕಿರುವಷ್ಟೇ ಸ್ಕೋಪ್ ಇದೆ ಎನ್ನಲಾಗ್ತಿದೆ.ಇನ್ನು ಪ್ರೇಮ್​ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ.

For All Latest Updates

TAGGED:

ABOUT THE AUTHOR

...view details