ಪ್ರಭುದೇವ ತಾವೊಬ್ಬ ಆ್ಯಕ್ಟರ್, ಡ್ಯಾನ್ಸರ್ ಮಾತ್ರವಲ್ಲ ಉತ್ತಮ ನಿರ್ದೇಶಕ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ತಮಿಳಿನ 'ಇಂದು' ಚಿತ್ರದಿಂದ ತಮ್ಮ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಪ್ರಭುದೇವ ತೆಲುಗಿನ 'ನುವ್ವೊಸ್ತಾನಂಟೆ ನೇನೊದ್ದಂಟಾನ' ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದರು.
ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ನಿರ್ದೇಶನಕ್ಕೆ ಮುಂದಾದ್ರಾ ಪ್ರಭುದೇವ...? - ದಬಾಂಗ್ 3
2009 ರಲ್ಲಿ ಬಿಡುಗಡೆಯಾಗಿದ್ದ 'ವಾಂಟೆಡ್' ಸಿನಿಮಾದ ಎರಡನೇ ಭಾಗ ತಯಾರಿಸಲು ಸಲ್ಮಾನ್ ಖಾನ್ ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಸಿನಿಮಾವನ್ನು ಪ್ರಭುದೇವ ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಇದರೊಂದಿಗೆ ದೇವಿ ಸೇರಿ 3-4 ಸಿನಿಮಾಗಳನ್ನು ನಿರ್ಮಾಣ ಕೂಡಾ ಮಾಡಿದ್ದಾರೆ ಪ್ರಭುದೇವ. ತಮನ್ನಾ ಜೊತೆ ಅವರು ನಟಿಸಿದ ದೇವಿ ಹಿಟ್ ಆಗಿದ್ದೇ ತಡ ಅದರ ಸೀಕ್ವೆಲ್ ಕೂಡಾ ತಯಾರಿಸಿದ್ದು, ಇದೀಗ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ದೇವಿ 2 ಸಿನಿಮಾವನ್ನು ಎ.ಎಲ್. ವಿಜಯ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ತೆಲುಗಿನಲ್ಲಿ ಅಭಿನೇತ್ರಿ 2 ಹೆಸರಿನಲ್ಲಿ ತಯಾರಾಗಿದೆ. 'ದೇವಿ-2' ಜೊತೆಗೆ ಪ್ರಭುದೇವ ನಟನೆ 'ಕಾಮೋಶಿ' ಬಿಡುಗಡೆಗೆ ಸಿದ್ಧವಿದೆ. ಇದರ ಜೊತೆಜೊತೆಗೆ ಪ್ರಭುದೇವ ಸಲ್ಮಾನ್ ಖಾನ್ ನಟನೆಯ ದಬಾಂಗ್ 3 ಸಿನಿಮಾ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ.
ಇದೀಗ ಸಲ್ಮಾನ್ ಖಾನ್ ಮತ್ತೆ ಪ್ರಭುದೇವ ಜೊತೆ ಕೈ ಜೋಡಿಸಲು ನಿರ್ಧರಿಸಿದ್ದಾರೆ. 2009 ರಲ್ಲಿ ಪ್ರಭುದೇವ ನಿರ್ದೇಶಿಸಿದ್ದ 'ವಾಂಟೆಡ್' ಸಿನಿಮಾದ ಸೀಕ್ವೆಲ್ ಆರಂಭಿಸಲು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡುತ್ತಿದ್ದಾರೆ. ಎಲ್ಲ ಓಕೆ ಆದರೆ, ಪ್ರಭುದೇವ ನಿರ್ದೇಶನದಲ್ಲಿ ವಾಂಟೆಡ್-2 ಶೀಘ್ರವೇ ಸೆಟ್ಟೇರಲಿದೆ. ಇದರೊಂದಿಗೆ ತೆಲುಗಿನ 'ಪೋಕಿರಿ' ಕೂಡಾ ಹಿಂದಿಯಲ್ಲಿ ರೀಮೇಕ್ ಆಗಲಿದ್ದು, ಮುಂದಿನ ವರ್ಷ ಶೂಟಿಂಗ್ ಆರಂಭವಾಗಲಿದೆ.