ಹೈದರಾಬಾದ್(ತೆಲಂಗಾಣ): ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ನಟ ಪ್ರಭಾಸ್ ಇದೀಗ ಅಗ್ರಸ್ಥಾನಕ್ಕೇರಿದ್ದಾರೆ. ರಾಜಮೌಳಿ ನಿರ್ದೇಶನದ ಪ್ರಭಾಸ್ ಬಾಹುಬಲಿ (ಭಾಗ 1 ಮತ್ತು ಭಾಗ 2) ಸಿನಿಮಾದ ಯಶಸ್ಸಿನ ನಂತರ ಅವರ ಸಿನಿಮಾ ವೃತ್ತಿ ಜೀವನವು ಬದಲಾಗಿತ್ತು. ಇದರ ಜೊತೆಗೆ ತಮ್ಮ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದರು.
ಇದೀಗ ತಮ್ಮ ಅಭಿಮಾನಿಗಳಿಗೆ ಪ್ಯಾನ್-ಇಂಡಿಯಾ ಸಿನಿಮಾ ಕೊಡಲು ಸಿದ್ಧತೆ ಮಾಡಿಕೊಂಡಿರುವ ಈ ಟಾಲಿವುಡ್ ಸ್ಟಾರ್, ಭಾರತೀಯ ಚಿತ್ರರಂಗಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಜಿಗಿತ ಕಂಡಿದ್ದಾರೆ. ಸಹಜವಾಗಿ ಅವರ ಸಂಭಾವನೆಯೂ ಸಹ ದ್ವಿಗುಣಗೊಂಡಿದೆ.
ವರದಿ ಪ್ರಕಾರ ನಟ ಪ್ರಭಾಸ್ ತಮ್ಮ ಮುಂಬರುವ ಪೌರಾಣಿಕ ಆದಿಪುರುಷ್ ಸಿನಿಮಾಗಾಗಿ ಬರೋಬ್ಬರಿ ₹150 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಬಾಹುಬಲಿ ಚಿತ್ರದ ಜನಪ್ರಿಯತೆ ಮತ್ತು ಯಶಸ್ಸೇ ಇದಕ್ಕೆ ಮೂಲ ಕಾರಣ ಎಂಬ ಗುಲ್ಲು ಇದೆ.
ರಾಧಾ ಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್ ಚಿತ್ರ ಸೇರಿದಂತೆ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರಕ್ಕೆ ಪ್ರಭಾಸ್ ₹150 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ಓಂ ರಾವುತ್ ನಿರ್ದೇಶನದ ಆದಿಪುರುಷ್ ಚಿತ್ರಕ್ಕೂ ಇದೇ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಸ್ಪಿರಿಟ್ ಚಿತ್ರದ ಪೋಸ್ಟರ್
ಬಾಲಿವುಡ್ ಸೂಪರ್ಸ್ಟಾರ್ಗಳಾದ ಸಲ್ಮಾನ್ ಖಾನ್ ಮತ್ತು ಅಕ್ಷಯ ಕುಮಾರ್ ನಂತರ 100 ಕೋಟಿ ರೂ. ಪಡೆದ ನಟರೆಂದರೆ ಅದು ಪ್ರಭಾಸ್ ಎಂದು ಹೇಳಲಾಗುತ್ತಿದೆ. ಸುಲ್ತಾನ್ ಖಾನ್ ತಮ್ಮ ಟೈಗರ್ ಜಿಂದಾ ಹೈ ಚಿತ್ರಕ್ಕೆ ₹100 ಕೋಟಿ ಪಡೆದರೆ, ಅಕ್ಷಯ್ ಕುಮಾರ್ ಬೆಲ್ ಬಾಟಮ್ ಚಿತ್ರಕ್ಕೆ ಅವರೂ ಸಹ ₹100 ಕೋಟಿ ರೂ. ಪಡೆದಿದ್ದಾರೆ.
ರಾಧೆ ಶ್ಯಾಮ್ ಚಿತ್ರದ ಪೋಸ್ಟರ್
ಪ್ರಭಾಸ್ ಅವರ ಮೊದಲ ಹಿಂದಿ ಚಿತ್ರ ಸಾಹೋ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಅದರ ಹೊರತಾಗಿಯೂ ಅವರ ಸ್ಟಾರ್ಡಮ್ ಕಡೆಮೆಯಾಗಿಲ್ಲ. ಸದ್ಯಕ್ಕೆ ಎಲ್ಲರ ಕಣ್ಣು ರಾಧೆ ಶ್ಯಾಮ್, ಆದಿಪುರುಷ್ ಮತ್ತು ಸ್ಪಿರಿಟ್ ಚಿತ್ರದ ಮೇಲೆ ನೆಟ್ಟಿದೆ.
ಇದನ್ನೂ ಓದಿ: ಅಪ್ಪಾಜಿಯವರ ಆ ಕಾಳಜಿಯುಳ್ಳ ಹೃದಯವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ: ದರ್ಶನ್ ಟ್ವೀಟ್