ಕರ್ನಾಟಕ

karnataka

ETV Bharat / sitara

ಪ್ರಭಾಸ್-ಶ್ರದ್ಧಾ​ ಮಧ್ಯೆ ಸಮ್​​ಥಿಂಗ್ ಸಮ್​ಥಿಂಗ್​​... ಬಿಟೌನ್​ ಬ್ಯೂಟಿಗೆ ಬಾಹುಬಲಿಯ ದುಬಾರಿ ಗಿಫ್ಟ್! - ಟಾಲಿವುಡ್​ ಡಾರ್ಲಿಂಗ್ ಪ್ರಭಾಸ್​

ಸಾಹೋ ಸಿನಿಮಾ ಬಳಿಕ ಶ್ರದ್ಧಾ ಜತೆ ಮತ್ತೊಂದು ದೊಡ್ಡ ಪ್ರಾಜೆಕ್ಟ್​​​ಗೆ ಪ್ರಭಾಸ್​ ಹಾಗೂ ಯುಕೆ ಕ್ರಿಯೇಷನ್​ ಸಹಿ ಮಾಡಿದದ್ದಾರಂತೆ.

Prabhas gifted Gifts

By

Published : Aug 13, 2019, 9:12 AM IST

ಟಾಲಿವುಡ್​ ಡಾರ್ಲಿಂಗ್ ಪ್ರಭಾಸ್​ ಅವರು ಬಾಲಿವುಡ್ ನಟಿ ಶ್ರದ್ಧಾ ಕಪೂರ್​ ಜತೆ ರಿಲೇಷನ್​ಶಿಪ್​​ನಲ್ಲಿದ್ದಾರೆ ಎನ್ನುವ ಗುಲ್ಲು ಎದ್ದಿದೆ.

ಯುಕೆ ಆ್ಯಂಡ್ ಯುಎಇ ಇಂಡಿಯನ್ ಸಿನಿಮಾ ಮ್ಯಾಗ್​​ಜಿನ್​​​ ಸಂಪಾದಕ ಉಮೇರ್ ಸಂಧು ತಮ್ಮ ಟ್ವಿಟ್ಟರ್​ನ​​ಲ್ಲಿ ಈ ಬಗ್ಗೆ​ ರಿವೀಲ್ ಮಾಡಿದ್ದಾರೆ. ಪ್ರಭಾಸ್​ ಹಾಗೂ ಶ್ರದ್ಧಾ ಡೇಟಿಂಗ್​​​ನಲ್ಲಿದ್ದಾರೆ ಎಂದು ಹೇಳಿರುವ ಅವರು, ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಹೊರಹಾಕಿದ್ದಾರೆ. ಸಾಹೋ ಸಿನಿಮಾ ಡಬ್ಬಿಂಗ್ ಮುಗಿಸಿದ ಬಳಿಕ ದುಬಾರಿ ಕಾರೊಂದು ಶ್ರದ್ಧಾಗೆ ಗಿಫ್ಟ್​ ಸಿಕ್ಕಿದೆ. ಅದನ್ನು ನೀಡಿದ್ದು ಪ್ರಭಾಸ್​ ಎಂದು ಟ್ವೀಟ್ ಮಾಡಿದ್ದಾರೆ ಉಮೇರ್​​.

ಬ್ರೇಕಿಂಗ್ ನ್ಯೂಸ್: ಪ್ರಭಾಸ್​ ಹಾಗೂ ಶ್ರದ್ಧಾ ಭಾರತದ ಹೊಸ ಹಾಟ್ ಕಪಲ್​​. ಈ ತಾರೆಯರು ಈಗ ಅಧಿಕೃತವಾಗಿ ರಿಲೇಷನ್​ಶಿಪ್​​ನಲ್ಲಿದ್ದಾರೆ ಎಂಬುದು ಅವರ ಆಪ್ತ ಸ್ನೇಹಿತರಿಂದ ತಿಳಿದುಬಂದಿದೆ ಎಂದು ಟ್ವಿಟ್ಟರ್​ನಲ್ಲಿ ರಿವೀಲ್ ಮಾಡಿದ್ದಾರೆ ಪತ್ರಕರ್ತ ಉಮೇರ್​​​.

ಸಾಹೋ ಸಿನಿಮಾ ಬಳಿಕ ಶ್ರದ್ಧಾ ಜತೆ ಮತ್ತೊಂದು ದೊಡ್ಡ ಪ್ರಾಜೆಕ್ಟ್​​​ಗೆ ಪ್ರಭಾಸ್​ ಹಾಗೂ ಯುಕೆ ಕ್ರಿಯೇಷನ್​ ಸೈನ್ ಮಾಡಿದ್ದಾರೆ ಎನ್ನುವ ವಿಚಾರವನ್ನೂ ಅವರು ಹೊರಹಾಕಿದ್ದಾರೆ.

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಸಿನಿಮಾ ಇದೇ 30 ರಂದು ಬಿಡುಗಡೆಯಾಗುತ್ತಿದೆ. ಕಳೆದೆರೆಡು ದಿನಗಳ ಹಿಂದೆಯಷ್ಟೇ ಈ ಚಿತ್ರದ ಟ್ರೇಲರ್ ರಿಲೀಸ್​ ಆಗಿದೆ.

ABOUT THE AUTHOR

...view details