ಹೈದ್ರಾಬಾದ್: ಮುಂಬೈನಲ್ಲಿ ಚಿತ್ರೀಕರಣವಾಗಬೇಕಿದ್ದ ಪ್ರಭಾಸ್ ಅಭಿನಯದ 'ಆದಿಪುರುಷ್' ಚಿತ್ರ ಇದೀಗ ಹೈದ್ರಾಬಾದ್ಗೆ ಶಿಫ್ಟ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.
ಎಲ್ಲಾ ಚಲನಚಿತ್ರಗಳು ಮತ್ತು ಟಿವಿ ನಿರ್ಮಾಣಗಳ ಚಿತ್ರೀಕರಣವನ್ನು ನಿಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದ ನಂತರ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ನಿರ್ಮಾಣವನ್ನು ಹೈದರಾಬಾದ್‌ಗೆ ವರ್ಗಾಯಿಸುವ ಆಲೋಚನೆ ನಡೆದಿದೆ. ಅದಕ್ಕಾಗಿ ಈಗಾಗಲೇ ಹೈದರಾಬಾದ್‌ನಲ್ಲಿ ಬೃಹತ್ ಸೆಟ್‌ಗಳನ್ನು ರೆಡಿ ಮಾಡಲಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗ್ತಿದೆ.
ಕೋವಿಡ್ ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರ ನಿರ್ಬಂಧಗಳನ್ನು ಹೇರಿರುವುದರಿಂದ ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಚಿತ್ರವನ್ನು ಹೈದರಾಬಾದ್‌ಗೆ ಸ್ಥಳಾಂತರಿಸಬಹುದು ಎನ್ನಲಾಗಿದೆ.
ಸಿನಿಮಾ ತಯಾರಕರು ಈಗಾಗಲೇ ಮುಂಬಯಿಯಲ್ಲಿ ಸಿನಿಮಾಗಾಗಿ ಎರಡು ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದರು- ಒಂದು ಫಿಲ್ಮ್ ಸಿಟಿಯಲ್ಲಿ ಮತ್ತು ಅದರ ಹೊರಗೆ ಒಂದು. ಆದರೆ, ಮೊದಲಿನಿಂದಲೂ ನಟ ಪ್ರಭಾಸ್ಗೆ ಮುಂಬೈನಲ್ಲಿ ಚಿತ್ರೀಕರಣ ಮಾಡುವುದು ಇಷ್ಟವಿರಲಿಲ್ಲ ಎನ್ನಲಾಗಿದೆ.
ಆದರೆ, ಇದೀಗ ಕೊರೊನಾ ಲಾಕ್ಡೌನ್ ಹಿನ್ನೆಲೆ ಸಿನಿಮಾ ಚಿತ್ರೀಕರಣಕ್ಕೆ ನಿರ್ಬಂಧ ಇರುವುದರಿಂದ ಈ ಹಿಂದೆ ಪ್ರಭಾಸ್ ಹೈದ್ರಾಬಾದ್ನಲ್ಲಿ ಶೂಟಿಂಗ್ ಮಾಡುವಂತೆ ಸೂಚಿಸಿದ್ದನ್ನು ಕಾರ್ಯಗತಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.