ಕರ್ನಾಟಕ

karnataka

ETV Bharat / sitara

‘ನಾನು ನಿಮಗಾಗಿ ಬೆತ್ತಲಾಗುತ್ತೇನೆ’ ಎಂದು ಬರೆದು ನನ್ನ ನಂಬರ್ ಹರಿಬಿಟ್ಟರು: ರಾಜ್ ಕುಂದ್ರಾ ವಿರುದ್ಧ ಪೂನಂ ಆರೋಪ

ನಾನು ಅವರ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕಾಗಿತ್ತು ಎಂಬುದು ಅವರ ಬೆದರಿಕೆಯಾಗಿತ್ತು. ಅವರು ಯಾವಾಗ ಹೇಳುತ್ತಾರೋ ಆವಾಗ ಅಥವಾ ಯಾವ ರೀತಿ ಬೇಕಾದರೂ ಶೂಟ್ ಮಾಡಬೇಕು ಇಲ್ಲದಿದ್ದರೆ ಅವರು ನನ್ನ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

poonam-pandey-claims-raj-kundra-threatened-her-to-sign-contract
ರಾಜ್ ಕುಂದ್ರಾ ವಿರುದ್ಧ ಪೂನಂ ಆರೋಪ

By

Published : Jul 23, 2021, 1:33 PM IST

ಮುಂಬೈ:ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಬಂಧನದ ಬೆನ್ನಲ್ಲೇ ಒಂದಾದ ಮೇಲೊಂದು ಹೊಸ ಪ್ರಕರಣ, ವಿವಾದ ಕೇಳಿ ಬರುತ್ತಿದೆ. ಈ ಮೊದಲು ಕಾಂಟ್ರ್ಯಾಕ್ಟ್ ಮುಗಿದರೂ ನನ್ನ ಕಂಟೆಂಟ್​ ಅನ್ನು ನಿರ್ದಾಕ್ಷಿಣ್ಯವಾಗಿ ಬಳಸಲು ಪ್ರಾರಂಭಿಸಿದರು ಎಂದು ಆರೋಪಿಸಿದ್ದ ನಟಿ ಪೂನಂ ಪಾಂಡೆ ಇದೀಗ ಮತ್ತೊಂದು ಸುತ್ತಿನ ಆರೋಪ ಹೊರಿಸಿದ್ದಾರೆ.

ಅವರ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳುವಂತೆ ನಿರಂತರ ಬೆದರಿಕೆ ಹಾಕುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಿಷ್ಟೇ ಅಲ್ಲ ನಾನು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದಾಗ ನನ್ನ ಮೊಬೈಲ್ ನಂಬರ್ ಅನ್ನು ವೈಬ್​ಸೈಟ್​ನಲ್ಲಿ ಹರಿಬಿಟ್ಟಿದ್ದರು, ಜೊತೆಗೆ ಆ ನನ್ನ ವೈಯಕ್ತಿಕ ನಂಬರ್​ನ ಕೆಳಗೆ ‘ನನಗೆ ಕರೆ ಮಾಡಿ, ನಾನು ನಿಮಗಾಗಿ ಬೆತ್ತಲಾಗುತ್ತೇನೆ’ ಎಂದು ಬರೆದು ಪೋಸ್ಟ್ ಮಾಡಿದ್ದರು ಎಂದು ಪೂನಂ ಆರೋಪಿಸಿದ್ದಾರೆ.

ವಲಸಿಗರಂತೆ ನಾನು ಬದುಕಿದ್ದೇನೆ

ಹೀಗೆ ನನ್ನ ನಂಬರ್ ಹರಿಬಿಟ್ಟ ನನಗೆ ಅಂತಾರಾಷ್ಟ್ರೀಯ ಕರೆಗಳು ಬರಲು ಆರಂಭವಾದವು. ಅಲ್ಲದೇ ಬೆದರಿಕೆ ಕರೆಗಳು, ಅಶ್ಲೀಲ ನಿಂದನೆಯ ಕರೆಗಳು ಸಹ ಬರುತ್ತಿದ್ದವು ಎಂದಿದ್ದಾರೆ. ಮುಂದುವರಿದು, ಇದಾದ ಮೇಲೆ ನಾನು ಮನೆಯಲ್ಲಿಯೇ ಇರಲಿಲ್ಲ. ವಲಸಿಗರಂತೆ ನಾನು ಬದುಕಿದ್ದೇನೆ. ಆದರೆ, ಈ ವೇಳೆ ನನಗೆ ಬರುತ್ತಿದ್ದ ಸಂದೇಶಗಳಿಂದ ನಿಜಕ್ಕೂ ನನಗೆ ಭಯವಾಗುತ್ತಿತ್ತು. ನೀವೂ ಎಲ್ಲಿದ್ದೀರಿ ಎಂಬುದು ನನಗೆ ಗೊತ್ತು ಎಂಬೆಲ್ಲಾ ಸಂದೇಶ ನನಗೆ ಬರುತ್ತಿತ್ತು. ಆಗ ಹೆಚ್ಚು ಭಯವಾಗುತಿತ್ತು ಎಂದು ಪೂನಂ ಹೇಳಿಕೊಂಡಿದ್ದಾರೆ.

ನಾನು ಅವರ ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕಾಗಿತ್ತು ಎಂಬುದು ಅವರ ಬೆದರಿಕೆಯಾಗಿತ್ತು. ಅವರು ಯಾವಾಗ ಹೇಳುತ್ತಾರೋ ಆವಾಗ ಅಥವಾ ಯಾವ ರೀತಿ ಬೇಕಾದರೂ ಶೂಟ್ ಮಾಡಬೇಕು ಇಲ್ಲದಿದ್ದರೆ ಅವರು ನನ್ನ ಖಾಸಗಿ ಮಾಹಿತಿಯನ್ನು ಸೋರಿಕೆ ಮಾಡುವುದಾಗಿ ಬೆದರಿಸುತ್ತಿದ್ದರು. ನಾನು ಇಲ್ಲ ಎಂದು ಹೇಳಿದಾಗ, ನನ್ನ ಮೊಬೈಲ್ ನಂಬರ್​​ ಅನ್ನು ಇಂಟರ್​ನೆಟ್​​ನಲ್ಲಿ​ ಸೋರಿಕೆ ಮಾಡಲಾಯಿತು ಎಂದು ಆರೋಪಿಸಿದ್ದಾರೆ.

ವಕೀಲರು ಬೇಡ ಎಂದರೂ ಆದರೂ ಹೇಳುತ್ತಿದ್ದೇನೆ

ನನ್ನ ಪರ ವಕೀಲರು ಬೇಡ ಎಂದ ಮೇಲೂ ಸಹ ನಾನು ಈ ಹೇಳಿಕೆಯನ್ನ ನೀಡುತ್ತಿದ್ದೇನೆ. ಏಕೆಂದರೆ ರಾಜ್​​ ಕುಂದ್ರಾ ನನಗೆ ಈ ರೀತಿ ಮಾಡಿದ್ದಾರೆ ಎಂದಾದರೆ ಬೇರೆಯವರ ಕಥೆ ಏನು..? ನಾನು ಎಲ್ಲಾ ನೋಂದವರಿಗೂ ಮನವಿ ಮಾಡುತ್ತೇನೆ, ದಯವಿಟ್ಟು ನಿಮಗಾದ ತೊಂದರೆ ಹೇಳಿಕೊಳ್ಳಿ, ಅನ್ಯಾಯದ ವಿರುದ್ಧ ದನಿ ಎತ್ತಿ ಎಂದು ಪೂನಂ ಕರೆ ಕೊಟ್ಟಿದ್ದಾರೆ.

ಇದಕ್ಕೂ ಮೊದಲು 2019 ರಲ್ಲಿ, ಕುಂದ್ರಾ ಆರ್ಮ್ಸ್​ಪ್ರೈಮ್​(Armsprime) ಮೀಡಿಯಾದಲ್ಲಿ ಹೂಡಿಕೆ ಮಾಡಿದರು. ಇದು ಸೆಲೆಬ್ರಿಟಿಗಳ ಅಪ್ಲಿಕೇಶನ್ ಆಗಿದೆ. ಪೂನಂ ಪಾಂಡೆ ಕೆಲವು ಪಾವತಿ ಸಮಸ್ಯೆಗಳಿಂದಾಗಿ ಒಪ್ಪಂದವನ್ನು ಕೊನೆಗೊಳಿಸಿದರಂತೆ. ಆದಾಗ್ಯೂ, ಒಂದು ಹೇಳಿಕೆಯಲ್ಲಿ, ಆರ್ಮ್ಸ್​ಪ್ರೈಮ್ ಮೀಡಿಯಾ ತಮ್ಮೊಂದಿಗೆ ಒಪ್ಪಂದವನ್ನು ರದ್ದುಗೊಳಿಸಿದ್ದಾರೆ ಮತ್ತು ಅವರ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ನಿಷೇಧಿಸಲಾಗಿದೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ.

ಇದನ್ನೂ ಓದಿ:ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ 'Adult film' ಮಾಡಲು ರಾಜ್‌ ಕುಂದ್ರಾ ಕಾರಣವಂತೆ!?

ABOUT THE AUTHOR

...view details