ಕರ್ನಾಟಕ

karnataka

ETV Bharat / sitara

ಲಾಕ್​ಡೌನ್​ ನಿಯಮ ಉಲ್ಲಂಘನೆ: ಬಾಲಿವುಡ್​ ನಟಿ ಪೂನಂ ವಿರುದ್ಧ ದಾಖಲಾಯ್ತು ಕೇಸು

ಲಾಕ್​ಡೌನ್​ ನಿಯಮ ಉಲ್ಲಂಘಿಸಿದ್ದಕ್ಕೆ ಬಾಲಿವುಡ್​ ನಟಿ, ಮಾಡೆಲ್‌ ಪೂನಂ ಪಾಂಡೆ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

Poonam Pandey
Poonam Pandey

By

Published : May 11, 2020, 11:34 AM IST

ಮುಂಬೈ:ಲಾಕ್​​ಡೌನ್​ ನಿಯಮಗಳನ್ನು ಮುರಿದು ಬೇಜವಾಬ್ದಾರಿತನ ತೋರಿದ ಪರಿಣಾಮ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ.

ಮರೀನ್​​ ಡ್ರೈವ್​ ಪ್ರದೇಶದಲ್ಲಿ ತನ್ನ ಸ್ನೇಹಿತರ ಕಾರಿನಲ್ಲಿ ಸುತ್ತಾಡುತ್ತಿದ್ದುದನ್ನು ಕಂಡ ಮುಂಬೈ ಪೊಲೀಸರು ಎಫ್​ಐಆರ್​​ ದಾಖಲಿಸಿ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಾಲಿವುಡ್​ ನಟಿ ಪೂನಂ ವಿರುದ್ಧ ಪ್ರಕರಣ

ಇವರ ವಿರುದ್ಧ ಐಪಿಸಿ ಸೆಕ್ಷನ್ 269 ಮತ್ತು 188 ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮೃತ್ಯುಂಜಯ್ ಹಿರೇಮಠ ತಿಳಿಸಿದ್ದಾರೆ.

ABOUT THE AUTHOR

...view details