ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್ನ ವಾಲ್ಮೀಕಿ ಚಿತ್ರದ ಮೂಲಕ ಪೂಜಾ ಹೆಗ್ಡೆ ತಮ್ಮ ಸಂಭಾವನೆಯ ಅಂಕಿ-ಅಂಶವನ್ನು ಬದಲಿಸಿಕೊಂಡಿದ್ದಾರಂತೆ. ಈ ಚಿತ್ರದಲ್ಲಿ ಕೇವಲ 20 ನಿಮಿಷದ ಪಾತ್ರಕ್ಕೆ ಪೂಜಾ ಹೆಗ್ಡೆ, ಬರೋಬ್ಬರಿ 1.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಅನ್ನೋದು ಟಾಲಿವುಡ್ನಲ್ಲಿ ಕೇಳಿಬರುತ್ತಿರುವ ಮಾತು.
ಸಂಭಾವನೆ ಹೆಚ್ಚಿಸಿಕೊಂಡ ಕರಾವಳಿ ಬೆಡಗಿ: 20 ನಿಮಿಷದ ಪಾತ್ರಕ್ಕೆ ಪೂಜಾ ಪಡೆದ ಹಣವೆಷ್ಟು ಗೊತ್ತಾ?! - ಕರಾವಳಿ ಬೆಡಗಿ ಪೂಜಾ ಹೆಗ್ಡೆ
ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಮಿಂಚುತ್ತಿರುವ ಕರ್ನಾಟಕದ ಕರಾವಳಿ ಬೆಡಗಿ ಪೂಜಾ ಹೆಗ್ಡೆ, ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಸ್ಟಾರ್ ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿರುವ ಪೂಜಾ ಹೆಗ್ಡೆ, ಮೂಲತಃ ಕನ್ನಡತಿಯಾದರೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಮಾತ್ರ ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ.
ವಾಲ್ಮೀಕಿ ಚಿತ್ರದ ನಿರ್ದೇಶಕ ಹರೀಶ್ ಶಂಕರ್ 50 ದಿನ ದಿನದ ಕಾಲ್ ಶೀಟ್ ಕೇಳಿದ್ದರಿಂದ ಪೂಜಾ ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಂತೆ. ಅದು ಆಗದು ಎಂದು ತಿಳಿದಾಗ ಹರೀಶ್ ಶಂಕರ್ ನಟಿ ಕೊಟ್ಟ 15 ದಿನದ ಕಾಲ್ ಶೀಟ್ನಲ್ಲಿಯೇ ಅವಶ್ಯಕವಿರುವ ಭಾಗವನ್ನು ಚಿತ್ರೀಕರಿಸಿದ್ದಾರಂತೆ. ಈ ಪೂರ್ತಿ ಚಿತ್ರದಲ್ಲಿ ಪೂಜಾ ಅವರ ಪಾತ್ರ 20 ನಿಮಿಷ ಮಾತ್ರ ಇರಲಿದೆಯಂತೆ.
ಇದೀಗ ಸಂಭಾವನೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿರುವ ಪೂಜಾ ಹೆಗ್ಡೆ ಚಿತ್ರವೊಂದಕ್ಕೆ 2 ಕೋಟಿ ರೂ. ಬೇಡಿಕೆ ಇಟ್ಟಿದ್ದಾರಂತೆ. ನಟಿಯ ಬೇಡಿಕೆಯನ್ನು ಪೂರೈಸಲು ಹಿಂದೆ ಬೀಳದ ನಿರ್ಮಾಪಕರು ಸಹ ಅಷ್ಟು ಹಣ ಕೊಡಲು ಒಪ್ಪಿಗೆ ಸೂಚಿಸುತ್ತಿದ್ದಾರಂತೆ. ಪೂಜಾ ಹೆಗ್ಡೆ ಇದೀಗ ಬಾಲಿವುಡ್ನ ಹೌಸ್ಫುಲ್ 4ನಲ್ಲಿ ನಟಿಸುತ್ತಿದ್ದಾರೆ.