ಹೈದರಾಬಾದ್:ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಮುಂಬರುವ ಚಿತ್ರ 'ಕಭಿ ಈದ್ ಕಭಿ ದಿವಾಲಿ'ಯಲ್ಲಿ ಪೂಜಾ ಹೆಗ್ಡೆ ತೆರೆ ಹಂಚಿಕೊಳ್ಳಲಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ನಟಿ, ಸೆಟ್‌ನಲ್ಲಿ ದಬಾಂಗ್ ಸ್ಟಾರ್ ಜೊತೆ ನಟಿಸಲು ಕಾತರರಾಗಿರುವುದಾಗಿ ತಿಳಿಸಿದ್ದಾರೆ.
'ಕಭಿ ಈದ್ ಕಭಿ ದಿವಾಲಿ'ಯಲ್ಲಿ ಸಲ್ಮಾನ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ: ಪೂಜಾ ಹೆಗ್ಡೆ - ಬಾಲಿವುಡ್ ಬ್ಯಾಡ್ಬಾಯ್ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಮುಂಬರುವ ಚಿತ್ರ 'ಕಭಿ ಈದ್ ಕಭಿ ದಿವಾಲಿ'ಯಲ್ಲಿ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ.
ಈ ಹಿಂದೆ, ಕಭಿ ಈದ್ ಕಭಿ ದಿವಾಲಿಯನ್ನು 2021ರ ಈದ್ ಹಬ್ಬದ ವೇಳೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ತಡವಾಗಿದೆ. ಈ ಬಗ್ಗೆ ಮಾತನಾಡುತ್ತಾ, "ಇದು ಜನರನ್ನು ನಗಿಸುವ ಮೋಜಿನ ಚಿತ್ರ. ನಾವು ಇದನ್ನು ಈ ಹಿಂದೆಯೇ ಪ್ರಾರಂಭಿಸಲು ಯೋಜಿಸಿದ್ದೆವು. ಆದರೆ ಕೊರೊನಾದಿಂದ ಶೂಟಿಂಗ್ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿತು. ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಅವರೊಂದಿಗಿನ ನನ್ನ ಮೊದಲ ಚಿತ್ರ" ಪೂಜಾ ಹೇಳಿದ್ದಾರೆ.
ಸದ್ಯ ಪೂಜಾ ಅವರು ಪ್ರಭಾಸ್ ಜೊತೆಗಿನ 'ರಾಧೆ ಶ್ಯಾಮ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮೂಡಿ ಬರಲಿರುವ ಚಿತ್ರವು ಈ ವರ್ಷ ಜುಲೈ 30ರಂದು ತೆರೆಗೆ ಬರಲಿದೆ.