ಕರ್ನಾಟಕ

karnataka

ETV Bharat / sitara

ಅಮೆರಿಕದಲ್ಲಿ ‘ದ್ರೌಪದಿ’ಯಾಗಿ ತೆರೆ ಮೇಲೆ ಬರ್ತಿದ್ದಾರೆ ಪೂಜಾ ಬಾತ್ರಾ - Draupadi Unleashed

ಲಾಕ್​​​​​​ಡೌನ್​​ ಬಳಿಕ ಅಮೆರಿಕದಲ್ಲಿ ತೆರೆ ಕಾಣುತ್ತಿರುವ ಭಾರತದ ಮೊದಲ ಚಿತ್ರ ಇದಾಗಿದ್ದು, ನಾಳೆ ಮಲ್ಟಿಫ್ಲೆಕ್ಸ್​​​​ನಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಟಿ ಪೂಜಾ ಬಾತ್ರಾ ಮಾಹಿತಿ ನೀಡಿದ್ದಾರೆ. ಅಲ್ಲದೆ ಹದಿಹರೆಯದ ಹುಡುಗಿಯ ಜೀವನ ಹಂದರ ಹೊಂದಿರುವ ಚಿತ್ರ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

Pooja Batra's film Draupadi Unleashed to release theatrically in US
ಪೂಜಾ ಬಾತ್ರಾ ನಟನೆಯ ‘ದ್ರೌಪದಿ’ ಚಿತ್ರದ ಪೋಸ್ಟರ್​

By

Published : Sep 23, 2020, 3:32 PM IST

ಮುಂಬೈ: ನಟಿ ಪೂಜಾ ಬಾತ್ರಾ ನಟನೆಯ ‘ದ್ರೌಪದಿ ಅನ್​​ಲೀಸ್ಡ್​​​​​​​​​’ ಚಿತ್ರ ನಾಳೆ ಅಮೆರಿಕದಲ್ಲಿ ತೆರೆಗೆ ಬರುತ್ತಿದೆ. ಲಾಕ್​​​ಡೌನ್​ ಬಳಿಕ ತೆರೆಗೆ ಬರುತ್ತಿರುವ ಮೊದಲ ಭಾರತೀಯ ಸಿನಿಮಾ ಇದಾಗಿದ್ದು, ಈ ಕುರಿತು ನಟಿ ಬಾತ್ರಾ ತಮ್ಮ ಇನ್​​​​​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪೂಜಾ ಬಾತ್ರಾ ಇದಕ್ಕೂ ಮೊದಲು ಹಲವು ಹಿಟ್​​​ ಚಿತ್ರಗಳನ್ನು ನೀಡಿದ್ದಾರೆ. ‘ಕಹಿನ್​ ಪ್ಯಾರ್ ಹೋ ಜಾಯೆ’, ‘ಜೋಡಿ ನಂ 1’, ‘ಬಾಯಿ ಆ್ಯಂಡ್​ ನಾಯಕ್​​: ದಿ ರಿಯಲ್ ಹೀರೋ’ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

‘ಇದೀಗ ಇವರ ದ್ರೌಪದಿ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಕುರಿತು ಇನ್​​ಸ್ಟಾಗ್ರಾಮ್​​​​ನಲ್ಲಿ ಮಾಹಿತಿ ನೀಡಿರುವ ಬಾತ್ರಾ ‘ನನ್ನ ಸಿನಿಮಾ ದ್ರೌಪದಿ ಅನ್​​ಲೀಸ್ಡ್​​​​​​ ಗುರುವಾರ ತೆರೆಗೆ ಬರಲಿದೆ. ಇದು ಲಾಕ್​​ಡೌನ್​​ ಮುಗಿದ ಬಳಿಕ ಅಮೆರಿಕದಲ್ಲಿ ತೆರೆಗೆ ಬರುತ್ತಿರುವ ಭಾರತದ ಪ್ರಥಮ ಸಿನಿಮಾ.’

ಅಮೆರಿಕದಲ್ಲಿ ಕೊರೊನಾ ವೈರಸ್​​​ನಿಂದಾಗಿ​​ ಮಾರ್ಚ್​ ತಿಂಗಳಲ್ಲಿಯೇ ಎಲ್ಲಾ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. ಇದೀಗ ಎಲ್ಲಾ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ ಕೆಲವು ಮಲ್ಟಿಫ್ಲೆಕ್ಸ್​​​​ ಗಳು ಇನ್ನೂ ಬಂದ್ ಆಗಿವೆ.

ಈ ಸಿನಿಮಾ ಕುರಿತು ಬರೆದುಕೊಂಡಿರುವ ಬಾತ್ರಾ ‘ಕಥೆಯು 1930ರ ದಶಕದಲ್ಲಿ ಭಾರತೀಯ ಹುಡುಗಿಯೊಬ್ಬಳು ನಿಜವಾದ ಪ್ರೀತಿ ಹಾಗೂ ಅರೆಂಜ್ ಮ್ಯಾರೇಜ್ ನಡುವೆ ಸಿಕ್ಕಿ ಪರಿತಪಿಸುವ ಹದಿಹರೆಯದ ಹುಡುಗಿಯ ಸುತ್ತ ಹಣೆಯಲಾಗಿದೆ. ಅಲ್ಲದೆ ಹುಡುಗಿಯ ಸಂಕಷ್ಟದ ಜೀವನ ಯಾತ್ರೆಯಲ್ಲಿ ದೀರ್ಘಕಾಲದ ರಹಸ್ಯಗಳನ್ನು ಬೆಳಕಿಗೆ ತರಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದಲ್ಲದೆ ಕಥೆಯಲ್ಲಿ 20ನೇ ಶತಮಾನದ ಶ್ರೀಮಂತ ಭಾರತೀಯ ಹುಡುಗಿಯ ಜೀವನವನ್ನು ತೆರೆದಿಡುತ್ತದೆ. ಆಕೆಯ ಜೀವನ ಮಾರ್ಗದಲ್ಲಿ ಎದುರಿಸುವ ಕಷ್ಟದ ದಿನಗಳು ಇಂದಿನ ಪ್ರೇಕ್ಷಕರನ್ನು ಹಿಡಿದಿಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details