ನವದೆಹಲಿ :ಬಾಲಿವುಡ್ ನಟ ಟೈಗರ್ ಶ್ರಾಫ್ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ 'ವಂದೇ ಮಾತರಂ' ಹಾಡನ್ನು ಬಿಡುಗಡೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಟೈಗರ್ ಶ್ರಾಫ್ ವಿಡಿಯೋ ಸಾಂಗ್ ಜೊತೆಗೆ, 'ವಂದೇ ಮಾತರಂ.. ಇವು ಕೇವಲ ಪದಗಳಲ್ಲ, ಭಾವನೆಗಳು. ನಮ್ಮ ರಾಷ್ಟ್ರಕ್ಕೆ ಕೊಡುಗೆ ನೀಡಲು ನಮ್ಮನ್ನು ಪ್ರೇರೇಪಿಸುವ ಭಾವನೆಗಳು. ಈ ಸ್ವಾತಂತ್ರ್ಯ ದಿನಾಚರಣೆಯಂದು 130 ಕೋಟಿ ಭಾರತೀಯರಿಗೆ ಈ ವಿಡಿಯೋವನ್ನು ಅರ್ಪಿಸುವ ಸಣ್ಣ ಪ್ರಯತ್ನ' ಎಂದು ಸಾಂಗ್ ಜೊತೆಗೆ ಟ್ವೀಟ್ ಮಾಡಿದ್ದರು.
ಈ ವಿಡಿಯೋಗೆ ಶ್ಲಾಘನೆ ವ್ಯಕ್ತಪಡಿಸಿರುವ ಪ್ರಧಾನಿ, 'ಸೃಜನಶೀಲ ಪ್ರಯತ್ನ.. ವಂದೇ ಮಾತರಂ ಬಗ್ಗೆ ನೀವು ಹೇಳಿರುವುದನ್ನು ಸಂಪೂರ್ಣವಾಗಿ ಒಪ್ಪುತ್ತೇನೆ!' ಎಂದು ರಿಟ್ವೀಟ್ ಮಾಡಿದ್ದಾರೆ.