ನವದೆಹಲಿ: ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮೇಲೆ ನಿಷೇಧಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟ ಆಮೀರ್ ಖಾನ್ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.
ಇದೇ ಸ್ವಾತಂತ್ರ್ಯೋತ್ಸವದಂದು ಭಾಷಣ ಮಾಡಿದ್ದ ಮೋದಿ , ಮಹಾತ್ಮಾ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಾದ ಅಕ್ಟೋಬರ್ 2 ರಿಂದ ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ಬಳಸಬಾರದು ಎಂದು ದೇಶದ ಜನತೆಗೆ ಕರೆ ನೀಡಿದ್ದರು.
ಮೋದಿ ಅವರ ಈ ಕರೆಗೆ ದೇಶ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾದ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕಲು ದೇಶದ ಜನತೆ ಮುಂದಾಗಿದ್ದಾರೆ. ಇದೀಗ ನಟ ಆಮೀರ್ ಖಾನ್ ಕೂಡ ಮೋದಿ ಕರೆಗೆ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ಇನ್ನು ಆಮೀರ್ ಖಾನ್ ಟ್ವೀಟ್ ಪ್ರತಿಕ್ರಿಯಿಸಿರುವ ಮೋದಿ, ನಿಮ್ಮ ಅಮೂಲ್ಯವಾದ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ಉತ್ತೇಜನದ ನುಡಿಗಳು ಇತರರಿಗೆ ಪ್ರೋತ್ಸಾಹ ನೀಡಲಿ ಎಂದಿದ್ದಾರೆ.