ಹೈದರಾಬಾದ್:ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಹಿಂದಿ ಕಿರುತೆರೆ ನಟ ಪರ್ಲ್ ವಿ ಪುರಿಯವರನ್ನು ಬಂಧಿಸಲಾಗಿದೆ. ಈ ನಟನಿಗೆ ನಟಿ-ನಿರ್ದೇಶಕಿ ದಿವ್ಯಾ ಖೋಸ್ಲಾ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಬೆಂಬಲ ಸೂಚಿಸಿದ್ದಾರೆ.
ಈ ಮೊದಲು ಏಕ್ತಾ ಕಪೂರ್, ಅನಿತಾ ಹಸಾನಂದಾನಿ, ನಿಯಾ ಶರ್ಮಾ ಮತ್ತು ಇತರ ಬಾಲಿವುಡ್ ಸೆಲೆಬ್ರೆಟಿಗಳು ಪರ್ಲ್ ಅವರನ್ನು ಬೆಂಬಲಿಸಿ ಫೋಸ್ಟ್ ಹಾಕಿದ್ದರು. ಈಗ ದಿವ್ಯಾ ಕೂಡ ಪರ್ಲ್‌ಗೆ ತನ್ನ ಬೆಂಬಲ ಸೂಚಿಸಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಘಟನೆಯಲ್ಲಿ ಸಂತ್ರಸ್ತೆ ಎನ್ನಲಾಗಿರುವ ಅಪ್ರಾಪ್ತ ಬಾಲಕಿಯ ಹೆತ್ತವರನ್ನು ತಮ್ಮ ಮಗಳ ಪಾಲನೆಗಾಗಿ ಕಿತ್ತಾಡುತ್ತಿರುವ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ದಂಪತಿಯೆಂದು ದಿವ್ಯಾ ಆರೋಪಿಸಿದ್ದಾರೆ. ತನ್ನ ಮಗಳನ್ನು ತನ್ನ ವಶಕ್ಕೆ ಪಡೆಯಲು ಅಪ್ರಾಪ್ತ ಬಾಲಕಿಯ ತಂದೆ ಪರ್ಲ್ ನನ್ನು ಬಳಸಿಕೊಂಡಿದ್ದಾನೆ ಎಂದು ದಿವ್ಯಾ ದೂರಿದ್ದಾರೆ.