ಕರ್ನಾಟಕ

karnataka

ETV Bharat / sitara

'Y' ಮಟ್ಟದ ಸೆಕ್ಯುರಿಟಿ ನೀಡುವಂತೆ ನಟಿ ಪಾಯಲ್​ ಘೋಷ್​​ ಮನವಿ!

ನಿರ್ದೇಶಕ ಅನುರಾಗ್​ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿರುವ ನಟಿ ಪಾಯಲ್​ ಘೋಷ್​ ತಮಗೆ ವೈ ಮಟ್ಟದ ಸೆಕ್ಯುರಿಟಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Payal Ghosh
Payal Ghosh

By

Published : Oct 5, 2020, 7:48 PM IST

ಮುಂಬೈ:2013ರಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಮುಂಬೈ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ಮಾಡಿದ್ದು, ಇದೀಗ ತಮಗೆ ವೈ ಮಟ್ಟದ ಸೆಕ್ಯುರಿಟಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ​ಮುಖ್ ಅವರಿಗೆ ಪತ್ರ ಬರೆದು ನಟಿ ಪಾಯಲ್​ ಮನವಿ ಮಾಡಿಕೊಂಡಿದ್ದು, ಆರೋಪಿ ಈಗಲೂ ಫ್ರೀಯಾಗಿದ್ದು, ತಮ್ಮ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದಿದ್ದಾರೆ.

'Y' ಮಟ್ಟದ ಸೆಕ್ಯುರಿಟಿ ನೀಡುವಂತೆ ನಟಿ ಪಾಯಲ್​ ಘೋಷ್​​ ಮನವಿ

ಗೃಹ ಸಚಿವರಿಗೆ ಇವರು ಬರೆದಿರುವ ಪತ್ರವನ್ನ ಪಾಯಲ್​ ಪರ ವಕೀಲ ನಿತಿನ್​​ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ. ಆರೋಪಿಯನ್ನ ಇಲ್ಲಿಯವರೆಗೆ ಬಂಧನ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಅನುರಾಗ್​ ಕಶ್ಯಪ್​ ವಿರುದ್ಧ ಲೈಂಗಿಕ ಕಿರುಕುಳ (ಮೀಟೂ) ಆರೋಪ ಮಾಡಿದ್ದ ನಟಿ ಪಾಯಲ್​ ಘೋಷ್, ವೆರ್ಸೋವ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಶ್ಯಪ್​ ಅವರಿಗೆ ನೋಟಿಸ್​ ನೀಡಿದ್ದರು. ಹೀಗಾಗಿ ಈಗಾಗಲೇ ಕಶ್ಯಪ್ ವಿಚಾರಣೆಗೆ ಹಾಜರಾಗಿದ್ದಾರೆ.

ಇದರ ಬೆನ್ನಲ್ಲೇ ಮುಂಬೈನ ಅಂಧೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಟಿಯನ್ನ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಸೆ.19 ರಂದು ಪಾಯಲ್​ ಘೋಷ್ ತನ್ನ ಟ್ವಿಟರ್​ ಖಾತೆಯಲ್ಲಿ ಅನುರಾಗ್​ ಕಶ್ಯಪ್ ತಮಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬರೆದುಕೊಂಡಿದ್ದರು.

ABOUT THE AUTHOR

...view details