ಮುಂಬೈ :ಬಾಲಿವುಡ್‌ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿ ಪಾಯಲ್ ಘೋಷ್, ಈ ಕುರಿತು ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.
ನನಗೆ ಭದ್ರತೆ ಒದಗಿಸುವಂತೆ ನನ್ನ ವಕೀಲ ನಿತಿನ್ ಸತ್ಪೂಟ್ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ಪಾಯಲ್ ತಿಳಿಸಿದ್ದಾರೆ.
'ಅನುರಾಗ್ ಕಶ್ಯಪ್ ಡ್ರಗ್ಸ್ ಸೇವಿಸುತ್ತಾರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ, ನಾನು ಅವರನ್ನು ಭೇಟಿಯಾಗಿದ್ದಾಗ, ಅವರು ಧೂಮಪಾನ ಮಾಡುತ್ತಿದ್ದರು. ಆದರೆ, ಅದು ಖಂಡಿತವಾಗಿಯೂ ಸಿಗರೇಟ್ ಆಗಿರಲಿಲ್ಲ' ಎಂದು ಹೇಳಿದರು.