ಹೈದರಾಬಾದ್: ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ವಕೀಲ್ ಸಾಬ್’ ಇಂದು ತೆರೆಕಂಡಿದೆ. ಆದರೆ ತೆರೆಕಂಡ ಕೆಲವೇ ಗಂಟೆಗಳಲ್ಲಿ ಆನ್ಲೈನ್ನಲ್ಲಿ ಇಡೀ ಸಿನಿಮಾ ಲೀಕ್ ಆಗಿದೆ.
ಕೊರೊನಾದಿಂದ ಹಲವು ಚಿತ್ರಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದು, ಆದರೆ ವಕೀಲ್ ಸಾಬ್ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಈ ನಡುವೆ ಕಿಡಿಗೇಡಿಗಳು ಚಿತ್ರದ ಹೆಚ್ಡಿ ಪ್ರಿಂಟ್ ಅನ್ನು ಲೀಕ್ ಮಾಡಿದ್ದು, ಹಲವು ವೆಬ್ಸೈಟ್ನಲ್ಲಿ ಸಿನಿಮಾ ಹರಿ ಬಿಡಲಾಗಿದೆ.