ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 8 ರಂದು 'ಸೈನಾ' ಸಿನಿಮಾ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್ ಕಥೆ ಹೊಂದಿರುವ ಚಿತ್ರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ, ಸೈನಾ ನೆಹ್ವಾಲ್ ಪಾತ್ರದಲ್ಲಿ ನಟಿಸಿದ್ದಾರೆ.
ನಿಮ್ಮ ಬಯೋಪಿಕ್ ಯಾವಾಗ ಎಂಬ ಪ್ರಶ್ನೆಗೆ ಪರಿಣಿತಿ ಛೋಪ್ರಾ ಉತ್ತರಿಸಿದ್ದು ಹೀಗೆ - Badminton player Saina nehwal
ನಾನು ಜೀವನದಲ್ಲಿ ಇನ್ನೂ ಸಾಧನೆ ಮಾಡಬೇಕಿದೆ. ನನ್ನ ಬಯೋಪಿಕ್ ಮಾಡಲು ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ ಎಂದು ಪರಿಣಿತಿ ಛೋಪ್ರಾ ಹೇಳಿದ್ದಾರೆ. ಪರಿಣಿತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಸೈನಾ' ಸಿನಿಮಾ ಮಾರ್ಚ್ 26 ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಇದನ್ನೂ ಓದಿ:'ಸಲಗ' ಚಿತ್ರದ ಐ ಲವ್ ಯೂ ಹಾಡಿಗೆ ಸಂಜನಾ ಆನಂದ್ ಬೊಂಬಾಟ್ ಸ್ಟೆಪ್
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಅಮೋಲ್ ಗುಪ್ತೆ, ಪರಿಣಿತಿ ಛೋಪ್ರಾ ಸೇರಿದಂತೆ ಇನ್ನಿತರರು ಹಾಜರಿದ್ದರು. ಈ ಸಮಯದಲ್ಲಿ ಮಾಧ್ಯಮದವರು ಪರಿಣಿತ ಛೋಪ್ರಾ ಅವರನ್ನು ಉದ್ದೇಶಿಸಿ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪರಿಣಿತಿ ಜೀವನ ಚರಿತ್ರೆಯಲ್ಲಿ ನಟಿಸಿದ್ದೀರ. ಮುಂದಿನ ದಿನಗಳಲ್ಲಿ ನಿಮ್ಮ ಬಯೋಪಿಕ್ ಸಿನಿಮಾ ಬರುವುದಾದರೆ ಯಾವ ನಟಿ ನಿಮ್ಮ ಪಾತ್ರದಲ್ಲಿ ನಟಿಸಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಪರಿಣಿತಿ, "ನನ್ನ ಬಗ್ಗೆ ಆತ್ಮಚರಿತ್ರೆ ಬರಬೇಕಾದರೆ ನಾನು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಿರಬೇಕು. ಆದರೆ ನಾನು ಇದುವರೆಗೂ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ಚಿತ್ರರಂಗಕ್ಕೆ ಬಂದು ಕೆಲವೇ ವರ್ಷಗಳಷ್ಟೇ ಕಳೆದಿವೆ. ನನ್ನ ಬಯೋಪಿಕ್ ಬಗ್ಗೆ ಮುಂದಿನ ದಿನಗಳಲ್ಲಿ ಯೋಚಿಸೋಣ ಎಂದರು. ಮಾರ್ಚ್ 26 ರಂದು 'ಸೈನಾ' ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.