ಮುಂಬೈ:ಕೊರೊನಾ ಭೀತಿಯಿಂದ ಅನೇಕ ಜನರು, ಸೆಲೆಬ್ರಿಟಿಗಳು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಸಹ ಸೇರಿಕೊಂಡಿದ್ದು, ಇತ್ತೀಚೆಗೆ ಅವರು ಫೈಜರ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ, ಈ ಲಸಿಕೆಯನ್ನು ಅವರು ಲಂಡನ್ನಲ್ಲಿ ಪಡೆದುಕೊಂಡಿದ್ದಾರೆ.
"ಭಾರತೀಯ ಲಸಿಕೆ ಬಗ್ಗೆ ನಂಬಿಕೆಯಿಲ್ಲವೇ"... ವಿದೇಶಿ ವ್ಯಾಕ್ಸಿನ್ ಹಾಕಿಸಿಕೊಂಡ ಪರಿಣಿತಿಗೆ ನೆಟಿಜನ್ಸ್ ಪ್ರಶ್ನೆ! - ಪರಿಣಿತಿ ಚೋಪ್ರಾ ಲಂಡನ್ ಸುದ್ದಿ
ಫೈಜರ್ ಲಸಿಕೆಯನ್ನು ಹಾಕಿಸಿಕೊಂಡ ಬಳಿಕ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾಗೆ ನೆಟ್ಟಿಗರು ಖಡಕ್ ಪ್ರಶ್ನೆ ಕೇಳಿದ್ದಾರೆ.
ಲಸಿಕೆ ಪಡೆದ ಬಳಿಕ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ನಟಿ, "ನನ್ನ ಲಸಿಕೆ ಇಲ್ಲಿ ಸಿಕ್ಕಿತು. ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, "ಹಾಗಾದರೆ ಭಾರತದ ವ್ಯಾಕ್ಸಿನ್ ಮೇಲೆ ನಂಬಿಕೆ ಇಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ನಟಿ ಇನ್ನೂ ಉತ್ತರಿಸಿಲ್ಲ.
ಸದ್ಯ ಲಸಿಕೆ ಪಡೆದಿರುವ ನಟಿ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಪರಿಣಿತಿ ಚೋಪ್ರಾ ಲಂಡನ್ನಲ್ಲಿ ತನ್ನ ಸಹೋದರಿ ನಟಿ ಪ್ರಿಯಾಂಕ ಚೋಪ್ರಾ ಜತೆ ಸಮಯ ಕಳೆಯುತ್ತಿದ್ದು, ಅವರ ನಟನೆಯ 'ಸೈನಾ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.