ಕರ್ನಾಟಕ

karnataka

By

Published : Feb 5, 2021, 12:33 PM IST

ETV Bharat / sitara

ಬಿಎಎಫ್​ಟಿಎ ಪ್ರಶಸ್ತಿಗೆ ಆಯ್ಕೆಯಾದ ಪಿಗ್ಗಿ...ಸಂತೋಷ ಹಂಚಿಕೊಂಡ ಸಹೋದರಿ ಪರಿಣಿತಿ

ಬಿಎಎಫ್​ಟಿಎ ಪ್ರಶಸ್ತಿಗೆ ಸಹೋದರಿ ಪ್ರಿಯಾಂಕಾ ಚೋಪ್ರಾ ಆಯ್ಕೆಯಾಗಿರುವ ವಿಚಾರವನ್ನು ಪರಿಣಿತಿ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. 'ದಿ ವೈಟ್ ಟೈಗರ್​​' ಚಿತ್ರದಲ್ಲಿನ ನಟನೆಗಾಗಿ ಪ್ರಿಯಾಂಕಾ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Priyanka chopra
ಪ್ರಿಯಾಂಕಾ ಚೋಪ್ರಾ

'ದಿ ವೈಟ್ ಟೈಗರ್' ಚಿತ್ರದಲ್ಲಿನ ನಟನೆಗಾಗಿ ಬಾಲಿವುಡ್​​​​​ ನಟಿ ಪ್ರಿಯಾಂಕಾ ಚೋಪ್ರಾಗೆ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್​ ಪ್ರಶಸ್ತಿ ದೊರೆತಿದ್ದು ಈ ಸಂತೋಷದ ವಿಚಾರವನ್ನು ಪ್ರಿಯಾಂಕಾ ತಂಗಿ ಪರಿಣಿತಿ ಚೋಪ್ರಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕ ಚೋಪ್ರಾ ಸಹ ನಿರ್ಮಾಣ ಕೂಡಾ ಇದೆ.

ಬಿಎಎಫ್​ಟಿಎ ಪ್ರಶಸ್ತಿ ಪಟ್ಟಿ

ಬಿಎಎಫ್​ಟಿಎ ನಿಂದ ಬಿಡುಗಡೆಯಾಗಿರುವ ವಿನ್ನರ್​​​ಗಳ ಹೆಸರಿರುವ ಪಟ್ಟಿಯನ್ನು ಪರಿಣಿತಿ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು ಸ್ನೇಹಿತರೇ, ನನ್ನ ಸಹೋದರಿ ಪ್ರಿಯಾಂಕಾ ಚೋಪ್ರಾ ಬಿಎಎಫ್​ಟಿಎ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಕೆ ಪ್ರಶಸ್ತಿ ಪಡೆಯುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. 'ದಿ ವೈಟ್ ಟೈಗರ್' ಚಿತ್ರ ಅತ್ಯುತ್ತಮ ಪೋಷಕ ಪ್ರಶಸ್ತಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರವನ್ನು ರಮಿನ್ ಬಹ್ರಾನಿ ನಿರ್ದೇಶಿಸಿದ್ದು ಪ್ರಿಯಾಂಕಾ ಚೋಪ್ರಾ, ಆದರ್ಶ್​ ಗೌರವ್, ರಾಜ್​​ಕುಮಾರ್ ರಾವ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಗೆ ರಾಜ್​​ಕುಮಾರ್ ರಾವ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಮತ್ತೆ ಬಣ್ಣ ಹಚ್ಚಲು ರೆಡಿಯಾದ್ರು ರಾಗಿಣಿ ದ್ವಿವೇದಿ

'ದಿ ವೈಟ್ ಟೈಗರ್​' ಅಮೆರಿಕನ್-ಇಂಡಿಯನ್​​​​​​​ ಸಿನಿಮಾವಾಗಿದ್ದು, ಚಿತ್ರದ ಕಥೆಯನ್ನು ಅರವಿಂದ್ ಅಡಿಗ ಬರೆದಿರುವ ಬೂಕರ್ ಪ್ರಶಸ್ತಿ ವಿಜೇತ ದಿ ವೈಟ್ ಟೈಗರ್ ಪುಸ್ತಕದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ವರ್ಣ ವಿಭಜನೆ ಹಾಗೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಕರಾಳ ವಾಸ್ತವ ವಿಚಾರಗಳನ್ನು ತೋರಿಸಲಾಗಿದೆ. ಜನವರಿ 22 ರಂದು ಈ ಸಿನಿಮಾ ನೆಟ್​​ಫ್ಲಿಕ್ಸ್​​​ನಲ್ಲಿ ಬಿಡುಗಡೆಯಾಗಿತ್ತು.

ABOUT THE AUTHOR

...view details