ಕರ್ನಾಟಕ

karnataka

ETV Bharat / sitara

ಬಾಲಿವುಡ್​ನಲ್ಲಿ ಮತ್ತೊಂದು ಬಯೋಪಿಕ್: ಬ್ಯಾಡ್ಮಿಂಟನ್​ ರಾಕೆಟ್​​​​ ಹಿಡಿದು ಮೈದಾನಲ್ಲಿ ಕಾಣಿಸಿಕೊಂಡ ಬಿಟೌನ್​ ಬೆಡಗಿ..! - The Girl on the Train

ಇತ್ತೀಚೆಗೆ ಸಾಕಷ್ಟು ಕ್ರೀಡಾಪಟುಗಳ ಬಯೋಪಿಕ್​ಗಳು ತೆರೆಗೆ ಬರುತ್ತಿವೆ. ಇದೀಗ ಈ ಪಟ್ಟಿಗೆ ಮತ್ತೊಬ್ಬ ಆಟಗಾರ್ತಿಯ ಬಯೋಪಿಕ್ ಸೇರಲಿದೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್​ ಪರದೆ ಮೇಲೆ ಮೂಡಿಬರಲಿದ್ದು, ಪಾತ್ರದ ನಿರ್ವಹಣೆಗಾಗಿ ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್​ ರಾಕೆಟ್​​​ ಹಿಡಿದು ಮೈದಾನಕ್ಕೆ ಧುಮುಕಿದ್ದಾರೆ.

ಬಾಲಿವುಡ್​ ನಟಿ ಪರಿಣಿತಿ

By

Published : Oct 9, 2019, 10:25 AM IST

ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ ಇದೀಗ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಠಿಣ ಪರಿಶ್ರಮ ನಡೆಸುತ್ತಿರುವ ಪರಿಣಿತಿ, ಸೈನಾ ನೆಹ್ವಾಲ್ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬ್ಯಾಡ್ಮಿಂಟನ್ ಬಗ್ಗೆಯೂ ತರಬೇತಿ ಪಡೆಯುತ್ತಿದ್ದಾರಂತೆ.

ಬಹಳ ದಿನಗಳ ಹಿಂದೆಯೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬಯೋಪಿಕ್​ ಸೆಟ್ಟೇರಿತ್ತು. ಕಾರಣಾಂತರಗಳಿಂದ ಚಿತ್ರೀಕರಣ ನಿಂತುಹೋಗಿತ್ತು. ಇದೀಗ ಮತ್ತೆ ಚಿತ್ರೀಕರಣ ಪ್ರಾರಂಭವಾಗಿಲಿದ್ದು ನಟಿ ಪರಿಣಿತಿ ಚೋಪ್ರಾ ಮೈದಾನದಲ್ಲಿ ಬ್ಯಾಡ್ಮಿಂಟನ್​ ರಾಕೆಟ್​ ಹಿಡಿದು ಬೆವರಿಳಿಸುತ್ತಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಠಿಣ ಪರಿಶ್ರಮ ನಡೆಸುತ್ತಿರುವುದಕ್ಕೆ ಸೈನಾ ನೆಹ್ವಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಫೋಟೋವನ್ನು ಪರಿಣಿತಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್

ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು ಪಾತ್ರಕ್ಕಾಗಿ ರಾಕೆಟ್​ ಹಿಡಿದು ಮೈದಾನಕ್ಕಿಳಿದ್ದಾರೆ ಈ ಬಿಟೌನ್​ ಬೆಡಗಿ​ ಪರಿಣಿತಿ ಚೋಪ್ರಾ.

ABOUT THE AUTHOR

...view details