ನವದೆಹಲಿ:ಬಿಟೌನ್ನ ಅತ್ಯಂತ ಬ್ಯುಸಿ ನಟರಲ್ಲಿ ಪಂಕಜ್ ತ್ರಿಪಾಠಿ ಒಬ್ಬರು, ಆದರೆ ಅವರು ಸ್ಟಾರ್ ಎಂದರೇನು ಎಂಬುದೇ ಇದುವರೆಗೂ ಸರಿಯಾಗಿ ಅರ್ಥವಾಗುತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದುಕೊಂಡಿದ್ದೇನೆ ಎಂದು ಪಂಕಜ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಏನೂ ಬದಲಾಗಿಲ್ಲ, ನಾನೊಬ್ಬ ಸ್ಟಾರ್ ಎಂಬುದರ ಕುರಿತು ನನಗೇನೂ ಅನಿಸುವುದಿಲ್ಲ, ಈ ಸ್ಟಾರ್ಗಿರಿ ಎಂಬುದರ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ , ನನ್ನ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದೆ, ಇದುವರೆಗೂ ನಾನು ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ ಎಂದು ಪಂಕಜ್ ಹೇಳಿದ್ದಾರೆ. ಹಾಗೆಯೇ ಸೋಷಿಯಲ್ ಮೀಡಿಯಾಗೆ ನನ್ನ ಧನ್ಯವಾದಗಳು ಎಂದಿದ್ದಾರೆ.