ಕರ್ನಾಟಕ

karnataka

ETV Bharat / sitara

ಟಿಪ್‌ ಟಿಪ್ ಬರ್ಸಾ ಪಾನಿ ಹಿಂದಿ ಹಾಡಿಗೆ ಪಾಕ್‌ ಸಂಸದ ಡ್ಯಾನ್ಸ್‌ ; ವಿಡಿಯೋ ವೈರಲ್‌ - pakistani mp danced on akshay katrina song tip tip barsa pani

ಪಾಕ್‌ ಸಂಸದ ಅಮೀರ್ ಲಿಯಾಕತ್ ಹುಸೇನ್ ಅವರ ಡ್ಯಾನ್ಸ್ ವಿಡಿಯೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2018ರ ಆಗಸ್ಟ್‌ನಿಂದ ಅಮೀರ್‌ ಹುಸೇನ್‌ ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಸದಸ್ಯರಾಗಿದ್ದಾರೆ..

pakistani mp danced on akshay katrina song tip tip barsa pani
ಟಿಪ್-ಟಿಪ್ ಬರ್ಸಾ ಪಾನಿ ಹಿಂದಿ ಹಾಡಿಗೆ ಪಾಕ್‌ ಸಂಸದ ಡ್ಯಾನ್ಸ್‌; ವಿಡಿಯೋ ವೈರಲ್‌

By

Published : Jan 7, 2022, 2:25 PM IST

​​ಹೈದರಾಬಾದ್‌ :ಜಗತ್ತಿನಾದ್ಯಂತ ಬಾಲಿವುಡ್‌ ಹಾಡುಗಳಿಗೆ ಜನ ತಲೆದೂಗುತ್ತಾರೆ. ವಿದೇಶಿಯರೂ ಹಿಂದಿ ಹಾಡುಗಳನ್ನು ಬಹಳಷ್ಟು ಆನಂದಿಸುತ್ತಾರೆ. ಅನೇಕ ದೇಶಗಳಲ್ಲಿ ಮದುವೆ ಇತರೆ ಸಮಾರಂಭಗಳಲ್ಲಿ ಹಿಂದಿ ಹಾಡುಗಳಿಗೆ ನೃತ್ಯ ಮಾಡುವುದನ್ನು ನೋಡಿದ್ದೇವೆ.

ಆದರೆ, ನೆರೆಯ ಪಾಕಿಸ್ತಾನದ ಸಂಸದರೊಬ್ಬರು ಅಕ್ಷಯ್‌ ಹಾಗೂ ಕತ್ರಿನಾ ಅಭಿನಯದ ಸೂರ್ಯವಂಶಿ ಚಿತ್ರದಲ್ಲಿ ಹೊಸ ರೂಪ ನೀಡಿರುವ ಹಳೆಯ ಟಿಪ್-ಟಿಪ್ ಬರ್ಸಾ ಪಾನಿ ಹಾಡಿಗೆ ಡ್ಯಾನ್ಸ್‌ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್‌ ಆಗಿದೆ.

ಪಾಕ್‌ ಸಂಸದ ಅಮೀರ್ ಲಿಯಾಕತ್ ಹುಸೇನ್ ಅವರ ಡ್ಯಾನ್ಸ್ ವಿಡಿಯೋ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 2018ರ ಆಗಸ್ಟ್‌ನಿಂದ ಅಮೀರ್‌ ಹುಸೇನ್‌ ಪಾಕಿಸ್ತಾನದ ಅಸೆಂಬ್ಲಿಯಲ್ಲಿ ಸದಸ್ಯರಾಗಿದ್ದಾರೆ.

ಈ ವಿಡಿಯೋವನ್ನು ತೈಮೂರ್ ಜಮಾನ್ ಎಂಬ ವ್ಯಕ್ತಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗಮನಿಸಬೇಕಾದ ವಿಷಯ ಎಂದರೆ ಸಂಸದ ಅಮೀರ್ ಲಿಯಾಕತ್ ಹುಸೇನ್ ಉತ್ತಮ ನೃತ್ಯಗಾರ, ಅದಕ್ಕಾಗಿಯೇ ಅವರು 'ಟಿಪ್-ಟಿಪ್ ಬರ್ಸಾ ಪಾನಿ' ಹಾಡಿಗೆ ನೃತ್ಯದ ಮೂಲಕ ಸಂಚಲನ ಮೂಡಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:Watch: ಕೊರಿಯನ್​ ಮ್ಯೂಸಿಕ್​ಗೆ ಬಾಲಿವುಡ್ ನಟ ಟೈಗರ್ ಶ್ರಾಫ್​ ಸ್ಟೆಪ್ಸ್

For All Latest Updates

TAGGED:

ABOUT THE AUTHOR

...view details