ಕರ್ನಾಟಕ

karnataka

By

Published : May 25, 2021, 1:56 PM IST

Updated : May 25, 2021, 2:14 PM IST

ETV Bharat / sitara

ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್​.. ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಪಾಕ್​ ಅಭಿಮಾನಿಗಳು

ಮಿಯಾ ಖಲೀಫಾ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾರ್ನ್​ ಇಂಡಸ್ಟ್ರಿಯಲ್ಲಿ ಅಲ್ಪ ಅವಧಿವರೆಗೆ ಕಾಣಿಸಿಕೊಂಡರೂ ಕೂಡ ಇವರ ಖ್ಯಾತಿ ಮುಗಿಲೆತ್ತರಕ್ಕೆ ಬೆಳೆದಿದೆ. ಅವರು ಕೇವಲ 21 ವಯಸ್ಸಿನಲ್ಲಿಯೇ ಪಾರ್ನ್​ ಇಂಡಸ್ಟ್ರಿಯಲ್ಲಿ ಪ್ರಸಿದ್ಧಿಯಾಗಿದ್ದರು..

pakistan bans mia khalifa tiktok, pakistan bans mia khalifa tiktok account, former porn star mia khalifa, former porn star mia khalifa news, ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್, ಪಾಕ್​ನಲ್ಲಿ ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್, ಮಾಜಿ ಪಾರ್ನ್​ ಸ್ಟಾರ್​ ಮಿಯಾ ಖಲೀಫಾ, ಮಾಜಿ ಪಾರ್ನ್​ ಸ್ಟಾರ್​ ಮಿಯಾ ಖಲೀಫಾ ಸುದ್ದಿ,
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಪಾಕ್​ ಅಭಿಮಾನಿಗಳು

ಲಾಹೋರ್ ​:ಈಗಾಗಲೇ ಟಿಕ್​ಟಾಕ್ ಆ್ಯಪ್‌ನ ಪಾಕಿಸ್ತಾನ ಸರ್ಕಾರ ಎರಡು ಬಾರಿ ನಿಷೇಧಿಸಿದೆ. ಆದ್ರೆ, ಈಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ನಲ್ಲಿ ವಿಷಯವನ್ನು ಸೆನ್ಸಾರ್ ಮಾಡಲು ಹೊಸ ಮಾರ್ಗವನ್ನು ಕಂಡು ಕೊಂಡಿದ್ದು, ಪ್ರಾಧಿಕಾರ ಯಾರ ವೈಯಕ್ತಿಕ ಖಾತೆಯನ್ನು ಬ್ಯಾನ್​ ಮಾಡಬಹುದಾಗಿದೆ.

ಈಗ ಪಿಟಿಎ ಕ್ರೀಡಾ ನಿರೂಪಕಿ ಮತ್ತು ಪಾರ್ನ್​ ಸ್ಟಾರ್ ಮಿಯಾ ಖಲೀಫಾ ಖಾತೆಯನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಪಿಟಿಎ ಯಾವುದೇ ಅಧಿಕೃತ ಪ್ರಕಟಣೆ ಇಲ್ಲದೆ ಮಿಯಾ ಖಲೀಫಾ ಅವರ ಖಾತೆಯನ್ನು ನಿಷೇಧಿಸಿದೆ. ಯಾವ ಕಾರಣಕ್ಕೆ ಬ್ಯಾನ್​ ಮಾಡಿದ್ದಾರೆ ಎಂಬುದು ಮಾತ್ರ ತಿಳಿದು ಬಂದಿಲ್ಲ.

ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಪಾಕ್​ ಅಭಿಮಾನಿಗಳು

ರೊಚ್ಚಿಗೆದ್ದ ಅಭಿಮಾನಿಗಳು..

ಟಿಕ್​ಟಾಕ್​ನಲ್ಲಿ ಮಿಯಾ ಖಲೀಫಾ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಆದ್ರೆ, ಪಾಕಿಸ್ತಾನ ಅಭಿಮಾನಿಗಳಿಗೆ ಬ್ಯಾನ್​ ಆಗಿರುವ ವಿಷಯ ತಿಳಿದಿದ್ದು, ಟ್ವಿಟರ್​ ಮುಖಾಂತರ ಈ ವಿಷಯವನ್ನು ತೀವ್ರವಾಗಿ ಪ್ರಸ್ತಾಪಿಸಿದ್ದಾರೆ.

ಆಗ ಮಿಯಾ ಖಲೀಫಾಗೆ ತನ್ನ ಖಾತೆಯನ್ನು ನಿಷೇಧಿಸಲಾಗಿರುವ ಬಗ್ಗೆ ಮಾಹಿತಿ ತಿಳಿದಿದ್ದು, ಆಘಾತಕ್ಕೊಳಗಾಗಿದ್ದರು. ಬಳಿಕ ಟ್ವೀಟ್​ ಮೂಲಕ ತಮ್ಮ ಪಾಕ್​ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ.

ಅಭಿಮಾನಿಗಳನ್ನು ಸಮಾಧಾನಗೊಳಿಸಿದ ಮಿಯಾ

ಟಿಕ್​ಟಾಕ್​ ಇಲ್ಲಂದ್ರೆ ಏನಾಯ್ತು, ಇನ್ಮುಂದೆ ನನ್ನ ವಿಡಿಯೋಗಳನ್ನು ನೀವು ಟ್ವಿಟರ್​ನಲ್ಲೇ ನೋಡಿ. ಟಿಕ್​ಟಾಕ್​ನಲ್ಲಿ ಹಾಕಿದ್ದ ವಿಡಿಯೋಗಳನ್ನು ಮತ್ತೊಮ್ಮೆ ನಾನು ಟ್ವಿಟ್ಟರ್​ನಲ್ಲಿ ಶೇರ್​ ಮಾಡುತ್ತೇನೆ ಎಂದು ತಮ್ಮ ಪಾಕ್​ ಅಭಿಮಾನಗಳನ್ನು ಸಮಾಧಾನಗೊಳಿಸಿದ್ದಾರೆ.

ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಪಾಕ್​ ಅಭಿಮಾನಿಗಳು

ಮಿಯಾ ಜೈಜೈ... ಪಿಟಿಎಗೆ ಬೈಬೈ..

ಪಾಕಿಸ್ತಾನದ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮಿಯಾ ಖಲೀಫಾನನ್ನು ಬೆಂಬಲಿಸಿ ಜೈ ಹಾಕಿದರು. ಬಳಿಕ ಪಿಟಿಎ ಕ್ರಮವನ್ನು ಟೀಕಿಸಿದರು. ಪಿಟಿಎಯ ನಿಜವಾದ ಕೆಲಸ ಯಾವುದು, ಅವರು ಅದರ ಬಗ್ಗೆ ಗಮನಹರಿಸಬೇಕು ಎಂದು ಮಿಯಾ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು.

ಸಾಮಾಜಿಕ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಿಯಾ ಖಲೀಫಾ ಅನೇಕ ಬಾರಿ ಧ್ವನಿ ಎತ್ತಿದ್ದಾರೆ. ಪ್ಯಾಲೆಸ್ತೇನಿಯಾದವರ ಮೇಲೆ ಇಸ್ರೇಲ್​ ನಡೆಸಿದ ದಾಳಿಯ ವಿರುದ್ಧವೂ ಅವರು ಧ್ವನಿ ಎತ್ತಿದ್ದರು. ಈ ಪ್ರಕರಣದಲ್ಲಿ ವಿಶ್ವಸಂಸ್ಥೆಯು ಸುಮ್ಮನೆ ಕುಳಿತಿದೆ ಎಂದು ಮಿಯಾ ಖಲೀಫಾ ಆರೋಪಿಸಿದ್ದರು.

ಖಲೀಫಾ ಬಗ್ಗೆ ಪಿಟಿಎ ತೆಗೆದುಕೊಂಡ ನಿರ್ಧಾರವು ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಆದರೆ, ಇದು ಪಾಕಿಸ್ತಾನದಲ್ಲಿ ಪಿಟಿಎಯ ಹೊಸ ಹಕ್ಕುಗಳ ಕುರಿತು ಚರ್ಚೆಗೆ ನಾಂದಿ ಹಾಡಿದೆ. ಇಡೀ ವೇದಿಕೆಯನ್ನು ನಿಷೇಧಿಸುವ ಬದಲು, ಅವರು ಈಗ ಜನರ ಖಾತೆಗಳನ್ನು ವೈಯಕ್ತಿಕವಾಗಿ ನಿಷೇಧಿಸಬಹುದಾಗಿದೆ.

ಪಾಕಿಸ್ತಾನದಲ್ಲಿ ಪಿಟಿಎಯನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ಪಾಕಿಸ್ತಾನ ಸರ್ಕಾರವು ದೇಶದಲ್ಲಿ ಇತರ ಪ್ರಮುಖ ವಿಷಯಗಳನ್ನು ಬಿಟ್ಟು ಮಿಯಾವನ್ನು ನಿಷೇಧಿಸುವಲ್ಲಿ ನಿರತವಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಪಾಕ್​ ಅಭಿಮಾನಿಗಳು

ಮಿಯಾ ಖಲೀಫಾ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾರ್ನ್​ ಇಂಡಸ್ಟ್ರಿಯಲ್ಲಿ ಅಲ್ಪ ಅವಧಿವರೆಗೆ ಕಾಣಿಸಿಕೊಂಡರೂ ಕೂಡ ಇವರ ಖ್ಯಾತಿ ಮುಗಿಲೆತ್ತರಕ್ಕೆ ಬೆಳೆದಿದೆ. ಅವರು ಕೇವಲ 21 ವಯಸ್ಸಿನಲ್ಲಿಯೇ ಪಾರ್ನ್​ ಇಂಡಸ್ಟ್ರಿಯಲ್ಲಿ ಪ್ರಸಿದ್ಧಿಯಾಗಿದ್ದರು. ಆದರೆ, ಈಗ ಮಿಯಾ ಪಾರ್ನ್​ ಇಂಡಸ್ಟ್ರಿಯನ್ನು ತೊರೆದಿದ್ದಾರೆ.

Last Updated : May 25, 2021, 2:14 PM IST

ABOUT THE AUTHOR

...view details