ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಶಾಂತಿ ಜಾಗತಿಕ ಪ್ರಾರ್ಥನಾ ಸಭೆಯಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸೇರಿಕೊಂಡಿದ್ದರು. ಈ ಕ್ಷಣವನ್ನು ಆಧ್ಯಾತ್ಮಿಕ ಕ್ರಾಂತಿ ಎಂದು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಬಹಿರಂಗಪಡಿಸಿದ್ದಾರೆ.
ತನ್ನ ಸಹೋದರನ ಆತ್ಮಶಾಂತಿಗಾಗಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಸುಶಾಂತ್ ಅಭಿಮಾನಿಗಳು ಮತ್ತು ಜಗತ್ತಿನಾದ್ಯಂತದ ಹಿತೈಷಿಗಳಿಗೆ ಧನ್ಯವಾದ ಹೇಳಲು ಶ್ವೇತಾ ಸಭೆಯಲ್ಲಿ ಹಾಜರಿದ್ದವರ ಫೋಟೋಗಳನ್ನು ಕೊಲಾಜ್ ಮಾಡಿ ತಮ್ಮ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಸುಶಾಂತ್‌ಗಾಗಿ ಪ್ರಾರ್ಥಿಸಲು ಪ್ರಪಂಚದಾದ್ಯಂತ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ಸೇರುತ್ತಿದ್ದಾರೆ. ಇದು ಆಧ್ಯಾತ್ಮಿಕ ಕ್ರಾಂತಿಯಾಗಿದೆ. ಅಲ್ಲದೆ ಇದು ಪ್ರಪಂಚದಾದ್ಯಂತ ವೇಗವನ್ನು ಪಡೆಯುತ್ತಿದೆ. ಎಂದು ಅವರು ಬರೆದುಕೊಂಡಿದ್ದಾರೆ.
ಏಕ್ತಾ ಕಪೂರ್ ನಿರ್ದೇಶನದ ಧಾರಾವಾಹಿ ಪವಿತ್ರಾ ರಿಶ್ತಾ ಮೂಲಕ ಪರಸ್ಪರ ಪರಿಚಯವಾದ ಸುಶಾಂತ್ ಹಾಗೂ ನಟಿ ಅಂಕಿತಾ ಲೋಖಂಡೆ ಸ್ನೇಹ ಆರು ವರ್ಷಗಳ ಕಾಲ ಮುಂದುವರೆದಿತ್ತು. ಅಂಕಿತಾ ಕೂಡಾ ಸುಶಾಂತ್‌ಗೆ ಪ್ರಾರ್ಥನೆ ಸಲ್ಲಿಸಿದ್ದಳು. ಅಲ್ಲದೆ ಶ್ವೇತಾಳ ಸಾಮಾಜಿಕ ಮಾಧ್ಯಮದ ಪೋಸ್ಟ್ಗೂ ಬೆಂಬಲ ಸೂಚಿಸಿ "ಪ್ರಾರ್ಥನೆಗಳು ಏನನ್ನು ಬೇಕಾದರೂ ಬದಲಾಯಿಸಬಹುದು" ಎಂದು ಶ್ವೇತಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಅಂಕಿತಾ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಸಾವಿನ ಎರಡನೇ ತಿಂಗಳ ಪುಣ್ಯಸ್ಮರಣೆಯ ಕ್ರಮವಾಗಿ ಈ ಜಾಗತಿಕ ಪ್ರಾರ್ಥನಾ ಸಭೆಯ ಉಪಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು.
"ನೀವು ನಮ್ಮನ್ನು ಬಿಟ್ಟು 2 ತಿಂಗಳುಗಳು ಕಳೆದಿವೆ. ಆ ದಿನ ನಿಜವಾಗಿ ಏನಾಯಿತು ಎಂದು ತಿಳಿಯಲು ನಾವು ಇನ್ನೂ ಹೋರಾಡುತ್ತಿದ್ದೇವೆ. ಸುಶಾಂತ್ ಸಿಂಗ್ ರಜಪೂತ್ ಅವರ ಜಾಗತಿಕ 24 ಗಂಟೆಗಳ ಆಧ್ಯಾತ್ಮಿಕ ಪ್ರಾರ್ಥನಾ ಸಭೆಗಾಗಿ ದಯವಿಟ್ಟು ನಮ್ಮೊಂದಿಗೆ ಸೇರಿಕೊಳ್ಳಬೇಕೆಂದು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಸತ್ಯವು ಖಂಡಿತವಾಗಿಯೂ ಮೇಲುಗೈ ಸಾಧಿಸುತ್ತದೆ ಹಾಗೂ ನಮ್ಮ ಪ್ರೀತಿಯ ಸುಶಾಂತ್‌ಗೆ ನಾವು ನ್ಯಾಯವನ್ನು ಕಂಡುಕೊಳ್ಳುತ್ತೇವೆ "ಎಂದು ಶ್ವೇತಾ ಉಪಕ್ರಮವನ್ನು ಘೋಷಿಸುವ ಸಮಯದಲ್ಲಿ ಹಂಚಿಕೊಂಡಿದ್ದರು.