ಲಾಸ್ ಏಂಜಲೀಸ್ :ಕಿವುಡ ಕುಟುಂಬದ ಕಥೆಯಾಧಾರಿತ 'ಕೋಡಾ' ಸಿನಿಮಾ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಇದಲ್ಲದೇ ಸಿನಿಮಾಗೆ ಅತ್ಯುತ್ತಮ ಡಬ್ಬಿಂಗ್ ಚಿತ್ರಕಥೆ ಮತ್ತು ಅತ್ಯುತ್ತಮ ಪೋಷಕ ನಟ ವಿಭಾಗದಲ್ಲೂ ಪ್ರಶಸ್ತಿ ಬಂದಿದೆ. ಬೆಲ್‌ಫಾಸ್ಟ್, ಡೋಂಟ್ ಲುಕ್‌ಅಪ್, ಡ್ರೈವ್ ಮೈ ಕಾರ್, ಡ್ಯೂನ್, ಕಿಂಗ್ ರಿಚರ್ಡ್, ಲೈಕೋರೈಸ್ ಪಿಜ್ಜಾ, ನೈಟ್‌ಮೇರ್ ಅಲ್ಲೆ, ದಿ ಪವರ್ ಆಫ್ ಸೇರಿದಂತೆ ಕೋಡಾ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಅಂತಿಮಗಾಗಿ ಕೋಡಾ ಸಿನಿಮಾಗೆ ಪ್ರಶಸ್ತಿ ಲಭಿಸಿದೆ.
ಕೋಡಾ ಸಿನಿಮಾ ಸಿಯಾನ್ ಹೆಡರ್ ನಿರ್ದೇಶನದ ಹಾಸ್ಯ ನಾಟಕವಾಗಿದ್ದು, ಇದು 2014ರಲ್ಲಿ ತೆರೆ ಕಂಡ ಫ್ರೆಂಚ್ನ 'ಲಾ ಫ್ಯಾಮಿಲ್ಲೆ ಬೆಲಿಯರ್'ನ ಇಂಗ್ಲಿಷ್ ರೀಮೇಕ್ ಆಗಿದೆ. ಇದರಲ್ಲಿ ನಟಿ ಎಮಿಲಿಯಾ ಜೋನ್ಸ್ ಕಿವುಡ ಕುಟುಂಬದ ಮೀನುಗಾರಿಕೆ ವ್ಯಾಪಾರ ಮತ್ತು ಅವರ ಆಶೋತ್ತರಗಳಿಗೆ ಸಹಾಯ ಮಾಡಲು ಹೆಣಗಾಡುವುದನ್ನು ತೋರಿಸಲಾಗಿದೆ.