ನವದೆಹಲಿ :ಹೊಸ ವರ್ಷದಂದು ದಿವಂಗತ ತಂದೆ ಮತ್ತು ನಟ ಇರ್ಫಾನ್ ಖಾನ್ ಅವರನ್ನು ನೆನಪಿಸಿಕೊಂಡ ಪುತ್ರ ಬಾಬಿಲ್ ಖಾನ್, ತಂದೆ-ಮಗನ ಬಾಂಧವ್ಯವನ್ನು ಸೆರೆಹಿಡಿದಿರುವ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಾಬಿಲ್ ತನ್ನ ದಿ. ತಂದೆಯೊಂದಿಗಿರುವ ಎರಡು ಕ್ಯಾಂಡಿಡ್ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಇಬ್ಬರೂ ದಣಿದಂತೆ ಕಾಣುತ್ತಿದ್ದು, ಹಾಸಿಗೆ ಮೇಲೆ ನಿದ್ರಿಸುತ್ತಿದ್ದಾರೆ.
ಎರಡನೆಯ ಚಿತ್ರದಲ್ಲಿ ಇರ್ಫಾನ್ ಮತ್ತು ಅವರ ಮಗನ ನಡುವಿನ ಅಮೂಲ್ಯ ಕ್ಷಣವನ್ನು ಸೆರೆಹಿಡಿದಿದೆ. ಯಾಕೆಂದರೆ ಇಬ್ಬರ ಸಂತೋಷವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ.