ಮುಂಬೈ :ನಟ ಸುಶಾಂತ್ ಸಿಂಗ್ ರಜಪೂತ್ ನಿಧನವಾಗಿ ಮೂರು ತಿಂಗಳ ಬಳಿಕ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸುಶಾಂತ್ ಹೆಸರಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂಬ ವಿಷಯ ಹಂಚಿಕೊಂಡಿದ್ದಾರೆ.
ಸುಶಾಂತ್ ನೆನಪಿನಲ್ಲಿ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಅಭಿಮಾನಿಗಳು - ಪ್ಲಾಂಟ್ಸ್ ಫಾರ್ ಸುಶಾಂತ್ ಸಿಂಗ್ ರಜಪೂತ್
ಜೂನ್ 14 ರಂದು ಸಾವನ್ನಪ್ಪಿದ ತನ್ನ ಸಹೋದರನ ನೆನಪಿಗಾಗಿ ಶ್ವೇತಾ 'ಪ್ಲಾಂಟ್ಸ್ ಫಾರ್ ಸುಶಾಂತ್ ಸಿಂಗ್ ರಜಪೂತ್'(#Plants4SSR) ಎಂಬ ಅಭಿಯಾನವನ್ನು ಟ್ವಿಟರ್ನಲ್ಲಿ ಪ್ರಾರಂಭಿಸಿದ್ದರು..
ಸುಶಾಂತ್ ಸಿಂಗ್ ಅಭಿಮಾನಿಗಳು ಸಸಿಗಳನ್ನು ನೆಡುವುದರ ತುಣುಕುಗಳನ್ನೊಳಗೊಂಡ ವಿಡಿಯೋವನ್ನು ಟ್ವಿಟರ್ನಲ್ಲಿ ಶ್ವೇತಾ ಸಿಂಗ್ ಪೋಸ್ಟ್ ಮಾಡಿ, ಪ್ರಪಂಚದಾದ್ಯಂತ 1 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. #Plants4SSR ಅಭಿಯಾನಕ್ಕೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಜೂನ್ 14 ರಂದು ಸಾವನ್ನಪ್ಪಿದ ತನ್ನ ಸಹೋದರನ ನೆನಪಿಗಾಗಿ ಶ್ವೇತಾ 'ಪ್ಲಾಂಟ್ಸ್ ಫಾರ್ ಸುಶಾಂತ್ ಸಿಂಗ್ ರಜಪೂತ್'(#Plants4SSR) ಎಂಬ ಅಭಿಯಾನವನ್ನು ಟ್ವಿಟರ್ನಲ್ಲಿ ಪ್ರಾರಂಭಿಸಿದ್ದರು. ಇದಕ್ಕೆ ಸಾಥ್ ನೀಡಿದ್ದ ಸುಶಾಂತ್ ಅಭಿಮಾನಿಗಳು ಗಿಡಗಳನ್ನು ನೆಟ್ಟು, ಅದರ ತುಣುಕುಗಳನ್ನು ಹಂಚಿಕೊಂಡಿದ್ದಾರೆ.