ಕರ್ನಾಟಕ

karnataka

ETV Bharat / sitara

'ಬಾಯ್ಸ್ ಲಾಕರ್ ರೂಮ್'​​​​ ವಿಚಾರವಾಗಿ ಟ್ರೋಲ್ ಆದ ಬಾಲಿವುಡ್ ನಟಿ ಸ್ವರಾ ಭಾಸ್ಕರ್​​​​​..! - ಗರ್ಲ್ಸ್ ಲಾಕರ್ ರೂಮ್

ಕೆಲವು ದಿನಗಳ ಹಿಂದೆ 'ಬಾಯ್ಸ್ ಲಾಕರ್ ರೂಮ್'​​​​ ವಿಚಾರವಾಗಿ ಟ್ವಿಟ್ಟರ್​​ನಲ್ಲಿ ಪೋಸ್ಟ್ ಹಾಕಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈಗ ಟ್ರೋಲರ್ ಒಬ್ಬರಿಂದ ಗರ್ಲ್ಸ್ ಲಾಕರ್ ರೂಮ್​' ವಿಚಾರವಾಗಿ ಟ್ರೋಲ್​ಗೆ ಒಳಗಾಗಿದ್ದಾರೆ. ಯುವಜನತೆಯ ಮನಸ್ಥಿತಿ ಬಗ್ಗೆ ಸ್ವರಾ ಕಳವಳ ವ್ಯಕ್ತಪಡಿಸಿದ್ದಾರೆ.

Swara Bhasker
ಸ್ವರಾ ಭಾಸ್ಕರ್

By

Published : May 6, 2020, 10:27 PM IST

ಕೆಲವು ದಿನಗಳ ಹಿಂದೆ ದೇಶದಲ್ಲಿ ದೊಡ್ಡ ಸುದ್ದಿಯಾಗಿದ್ದ ವಿವಾದಾತ್ಮಕ 'ಬಾಯ್ಸ್ ಲಾಕರ್ ರೂಮ್'​​​​ ಚರ್ಚೆ ನಂತರ ಇದೀಗ 'ಗರ್ಲ್ಸ್ ಲಾಕರ್ ರೂಮ್​' ಟ್ರೆಂಡಿಂಗ್ ವಿಷಯವಾಗಿದೆ. ಇಂಟರ್​​​ನೆಟ್​​ನಲ್ಲಿ ಇದೀಗ ಇದೇ ವಿಚಾರ ಹರಿದಾಡುತ್ತಿದ್ದು ಈ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಟ್ವಿಟ್ಟರ್ ಯೂಸರ್ ಒಬ್ಬರು ಇನ್ಸ್​​​ಟಾಗ್ರಾಮ್​ನಲ್ಲಿ ಬಾಯ್ಸ್ ಲಾಕರ್ ರೂಮ್ ಗುಂಪಿನ​ ಸದಸ್ಯರು ಚಾಟ್ ಮಾಡಿದ್ದ ಸ್ಕ್ರೀನ್​​​​​​​​​​​​​​​​​​​​ಶಾಟ್​​​​​​​​ವೊಂದನ್ನು ತಮ್ಮ ಟ್ವಿಟ್ಟರ್​​​​ನಲ್ಲಿ ಹಂಚಿಕೊಂಡಿದ್ದರು. ಈ ಚಾಟ್​​ನಲ್ಲಿ ಯುವತಿಯರ ಕೆಲವೊಂದು ಅಶ್ಲೀಲ ಪೋಟೋಗಳನ್ನು ಷೇರ್ ಮಾಡಿದ್ದು, ಸಾಮೂಹಿಕ ಅತ್ಯಾಚಾರದ ಬಗ್ಗೆ ಚರ್ಚಿಸಲಾಗಿತ್ತು. ಈ ಗ್ರೂಪ್​​ನಲ್ಲಿ ಸುಮಾರು 20 ಯುವಕರಿದ್ದು ಎಲ್ಲರೂ 12-18 ವರ್ಷ ವಯಸ್ಸಿನವರು ಎಂದು ಈ ಟ್ವಿಟ್ಟರ್ ಯೂಸರ್ ಬಾಯ್ಸ್ ಲಾಕರ್ ರೂಮ್​​​ ಬಗ್ಗೆ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದ್ದರು.

ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಈ ವಿಚಾರವಾಗಿ ತಮ್ಮ ಟ್ವಿಟ್ಟರ್​​ನಲ್ಲಿ ಪ್ರತಿಕ್ರಿಯಿಸಿದ್ದರು. 'ಪೋಷಕರು ಹಾಗೂ ಶಿಕ್ಷಕರು ತಮ್ಮ ಮಕ್ಕಳಿಗೆ ಈ ವಿಚಾರವಾಗಿ ತಿಳಿಹೇಳಬೇಕು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ಸಾಲದು, ಅತ್ಯಾಚಾರಿಗಳನ್ನು ಹುಟ್ಟುಹಾಕುವ ವಿಕೃತ ಮನಸ್ಸುಗಳನ್ನು ನಾವು ನಾಶ ಮಾಡಬೇಕು' ಎಂದು ಟ್ವೀಟ್ ಮಾಡಿದ್ದರು.

ಆದರೆ ಇದೀಗ ಗರ್ಲ್ಸ್ ಲಾಕರ್ ರೂಮ್​ ಕೂಡಾ ಚರ್ಚೆಯ ವಿಚಾರವಾಗಿದ್ದು ಬಾಯ್ಸ್ ಲಾಕರ್ ರೂಮ್​​​​ನಲ್ಲಿ ಯುವಕರ ಗುಂಪು ಯುವತಿಯರ ಬಗ್ಗೆ ಹೇಗೆ ಚರ್ಚಿಸುತ್ತಾರೋ, ಅದೇ ರೀತಿ ಗರ್ಲ್ಸ್ ಲಾಕರ್ ರೂಮ್​​​ನಲ್ಲಿ ಯುವತಿಯರ ಗುಂಪು ಕೂಡಾ ಯುವಕರ ಬಗ್ಗೆ ಚಾಟ್ ಮೂಲಕ ಚರ್ಚಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಸ್ವರಾ ಭಾಸ್ಕರ್ ಟ್ರೋಲ್​​​ಗೆ ಒಳಗಾಗಿದ್ದಾರೆ. ಯುವತಿಯರು ಚಾಟ್ ಮಾಡಿರುವ ಕೆಲವೊಂದು ಸ್ಕ್ರೀನ್​ಶಾಟ್​​​​​ಗಳನ್ನು ಟ್ರೋಲರ್, ಸ್ವರಾ ಭಾಸ್ಕರ್ ಅವರಿಗೆ ಟ್ಯಾಗ್ ಮಾಡಿ ಈ ಬಗ್ಗೆ ಕೂಡಾ ಅಭಿಪ್ರಾಯ ವ್ಯಕ್ತಪಡಿಸುವಂತೆ ಕೇಳಿದ್ದಾರೆ. ಇದನ್ನು ನೋಡಿ ಸ್ವರಾ ಭಾಸ್ಕರ್ ಶಾಕ್ ಆಗಿದ್ದಾರೆ. ಯುವಜನತೆಯ ಮನಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ಧಾರೆ.

ಈ ನಡುವೆ ದೆಹಲಿ ಸೈಬರ್ ಸೆಲ್​​​, ಬಾಯ್ಸ್ ಲಾಕರ್ ರೂಮ್ ಗ್ರೂಪ್ ಅಡ್ಮಿನ್ ಒಬ್ಬನನ್ನು ಬಂಧಿಸಿದ್ದಾರೆ. ಬಂಧಿತ, ದಕ್ಷಿಣ ದೆಹಲಿಯ ಶಾಲೆಯ 15 ವರ್ಷದ ವಿದ್ಯಾರ್ಥಿ ಎನ್ನಲಾಗಿದೆ. ನಾನು ಗ್ರೂಪ್ ಮಾತ್ರ ಮಾಡಿದ್ದೆ, ಗುಂಪಿನ ಸದಸ್ಯರ ನಂಬರ್ ವಿನ: ಅವರ ಬಗ್ಗೆ ಬೇರೆ ಯಾವ ಮಾಹಿತಿ ಕೂಡಾ ನನಗೆ ಗೊತ್ತಿಲ್ಲ ಎಂದು ಬಾಲಕ ಹೇಳಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗುಂಪಿನ ಇತರ ಸದಸ್ಯರ ಹುಡುಕಾಟದಲ್ಲಿದ್ದಾರೆ.

ABOUT THE AUTHOR

...view details