ಮುಂಬೈ: ಬಾಲಿವುಡ್ ಬೆಡಗಿ ನೋರಾ ಫತೇಹಿ ಇತ್ತೀಚೆಗೆ ಬಿಡುಗಡೆಯಾದ ಕರೀಬ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಒರಿಜಿನಲ್ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ರಜಿತ್ ದೇವ್ ನೋರಾಗೆ ಹಾಡಿನ ಹುಕ್ ಸ್ಟೆಪ್ ಕಲಿಸಿದ್ದಾರೆ.
ಕರೀಬ್ ಹಾಡಿಗೆ ಸ್ಟೆಪ್ ಹಾಕಿದ ನೋರಾ: ಅಭಿಮಾನಿಗಳಿಗೆ ಚಾಲೆಂಜ್! - ಅಭಿಮಾನಿಗಳಿಗೆ ಚಾಲೆಂಜ್ ಹಾಕಿದ ನೋರಾ
ಮನೆಯಲ್ಲಿ ಕ್ರಿಯಾಶೀಲವಾಗಿ, ಸವಾಲು ಸ್ವೀಕರಿಸಲು ನೋರಾ ಫತೇಹಿ ತಮ್ಮ ಅಭಿಮಾನಿಗಳನ್ನು ಪ್ರೋತ್ಸಾಹಿಸಿದ್ದಾರೆ. ಈಗಾಗಲೇ ನೋರಾ ಕೋರಿಯಾಗ್ರಾಫರ್ ರಜಿತ್ ದೇವ್ ಜೊತೆ ಕರೀಬ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ನೋರಾ ರಜಿತ್ ಡ್ಯಾನ್ಸ್
ಸದ್ಯ ರಜಿತ್ ಹಾಗೂ ನೋರಾ ಇಬ್ಬರೂ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ರಜಿತ್ ದೇವ್ ನೋರಾಗೆ ಸ್ಟೆಪ್ ಕಲಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. ಮನೆಯಲ್ಲಿ ಕ್ರಿಯಾಶೀಲವಾಗಿ, ಸವಾಲು ಸ್ವೀಕರಿಸಲು ನೋರಾ ತಮ್ಮ ಅಭಿಮಾನಿಗಳನ್ನು ಮತ್ತಷ್ಟು ಪ್ರೋತ್ಸಾಹಿಸಿದ್ದಾರೆ.
ನೊರಾ ಅವರ ಕೋರಿಯಾಗ್ರಾಫರ್ ರಜಿತ್ ಕಮೆಂಟ್ ವಿಭಾಗದಲ್ಲಿ ಹಾರ್ಟ್ ಚಿಹ್ನೆಯನ್ನು ಕಳುಹಿಸಿದ್ದಾರೆ. ಸದ್ಯ ತಮ್ಮ ನೆಚ್ಚಿನ ನಟಿಯ ನೃತ್ಯ ನೋಡಿ ಫಿದಾ ಆಗಿದ್ದು, ಸಾಕಷ್ಟು ಲೈಕ್ಸ್, ಕಮೆಂಟ್ಗಳು ಹರಿದಾಡುತ್ತಿವೆ.