ಬಾಲಿವುಡ್‌ನ ಅದ್ಭುತ ನರ್ತಕಿ ಮತ್ತು ನಟಿ ನೋರಾ ಫತೇಹಿ ಯಾವಾಗಲೂ ತನ್ನ ಗ್ಲಾಮರಸ್ ಲುಕ್‌ನಿಂದ ಜನರ ಹೃದಯವನ್ನು ಗೆಲ್ಲುತ್ತಾರೆ. ಇದೀಗ ನೋರಾ ಫತೇಹಿ ಅವರ ಮುಂಬರುವ ಚಿತ್ರ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ'ದ 'ಝಾಲಿಮಾ ಕೋಕಾ ಕೋಲಾ' ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
'ಭುಜ್' ಸಿನಿಮಾದ ಸಾಂಗ್ ಬಿಡುಗಡೆ: ನೋರಾ ಫತೇಹಿ ಹಾಟ್ ಸ್ಟೆಪ್ಗೆ ಅಭಿಮಾನಿಗಳು ಫಿದಾ - ಭುಜ್: ದಿ ಪ್ರೈಡ್ ಆಫ್ ಇಂಡಿಯಾ
ನೋರಾ ಫತೇಹಿ ಅವರ ಮುಂಬರುವ ಚಿತ್ರ 'ಭುಜ್: ದಿ ಪ್ರೈಡ್ ಆಫ್ ಇಂಡಿಯಾ'ದ 'ಝಾಲಿಮಾ ಕೋಕಾ ಕೋಲಾ' ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ 1971ರ ನಡುವಿನ ಯುದ್ಧದ ಕಥೆಯನ್ನೊಳಗೊಂಡ ಭುಜ್ ಚಲನಚಿತ್ರದ ಟೀಸರ್ ಕಳೆದ ವಾರ ಬಿಡುಗಡೆಯಾಗಿದೆ. ಇದರಲ್ಲಿ ಅಜಯ್ ದೇವಗನ್, ಸಂಜಯ್ ದತ್, ಸೋನಾಕ್ಷಿ ಸಿನ್ಹಾ, ನೋರಾ ಫತೇಹಿ, ಶರದ ಕೇಲ್ಕರ್, ಪ್ರಣಿತಾ ಸುಭಾಷ್ ಮೊದಲಾದ ದೊಡ್ಡ ತಾರಾಗಣವೇ ಇದೆ.
ಈ ಚಿತ್ರವು ಭಾರತೀಯ ಸ್ಕ್ವಾರ್ಡನ್ ವಾಯು ಸೇನೆಯ ಮುಖ್ಯಸ್ಥರಾಗಿದ್ದ ವಿಜಯ್ ಕಾರ್ಣಿಕ್ ಅವರ ಜೀವನಗಾಥೆಯನ್ನು ಪ್ರಸ್ತುತಪಡಿಸಲಿದೆ. 1971ರಲ್ಲಿ ವಿಜಯ್ ಕಾರ್ಣಿಕ್ ಅವರು ಭುಜ್ ಏರ್ಪೋರ್ಟ್ನ ಉಸ್ತುವಾರಿ ವಹಿಸಿಕೊಂಡಿದ್ದರು. ದೇಶದ ರಕ್ಷಣೆಗಾಗಿ 300 ಜನ ಮಹಿಳೆಯರನ್ನು ಬಳಸಿಕೊಂಡು ಆ ವಿಮಾನ ನಿಲ್ದಾಣವನ್ನು ಹೇಗೆ ಮರು ನಿರ್ಮಿಸಿದರು ಎಂಬುದನ್ನು ಕಥೆಯು ಕಟ್ಟಿ ಕೊಡಲಿದೆ. ಇದೀಗ ಚಿತ್ರದ ಸಾಂಗ್ವೊಂದು ಬಿಡುಗಡೆಯಾಗಿದ್ದು, ನೋರಾ ಫತೇಹಿ ಹಾಟ್ ಸ್ಟೆಪ್ಗೆ ಗುಡ್ ರೆಸ್ಪಾನ್ಸ್ ದೊರೆಯುತ್ತಿದೆ.