ಮುಂಬೈ: ತನ್ನ ದಿವಂಗತ ತಾಯಿ ನರ್ಗಿಸ್ ದತ್ ಅವರ 92ನೇ ಜನ್ಮದಿನಾಚರಣೆಯಂದು ಅವರನ್ನು ನೆನಪಿಸಿಕೊಂಡ ಬಾಲಿವುಡ್ ನಟ ಸಂಜಯ್ ದತ್, ತಮ್ಮ ಕುಟುಂಬ ಆಲ್ಬಂನಿಂದ ಅಮೂಲ್ಯವಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಕುಟುಂಬದ ಹಳೆಯ ಚಿತ್ರಗಳ ಸರಣಿಯನ್ನು ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ. ಈ ಚಿತ್ರಗಳು ಸಂಜಯ್ ಅವರ ಕುಟುಂಬದ ಸಂತೋಷದ ಕ್ಷಣಗಳನ್ನು ತೋರಿಸುತ್ತವೆ.