ಕರ್ನಾಟಕ

karnataka

ETV Bharat / sitara

ತನುಶ್ರೀ ದತ್ತಾ 'ಮೀಟೂ' ಆರೋಪ: ನಾನಾ ಪಾಟೇಕರ್‌ ವಿರುದ್ಧ ಸಾಕ್ಷಿ ಕೊರತೆ!

ಓಶಿವರಾ ಪೊಲೀಸರು ಅಂಧೇರಿಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಿ ರಿಪೋರ್ಟ್​ ಸಲ್ಲಿಸಿದ್ದು, ನಾನಾ ಪಾಟೇಕರ್​ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್​​ನಲ್ಲಿ ನಾನಾ ಪಟೇಕರ್​ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

Tanushree Dutta

By

Published : Jun 13, 2019, 6:15 PM IST

ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್​ ವಿರುದ್ಧ ನಟಿ ತನುಶ್ರೀ ದತ್ತಾ 'ಮೀಟೂ'(ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸಾಮಾಜಿಕ ಅಭಿಯಾನ) ಆರೋಪ ಮಾಡಿದ್ದು ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಆದರೆ ಇದೀಗ ಪಾಟೇಕರ್​ ವಿರುದ್ಧ ಯಾವುದೇ ಸಾಕ್ಷಿ ಸಿಕ್ಕಿಲ್ಲ ಎಂದು ಮುಂಬೈ ಪೊಲೀಸರು ಕೋರ್ಟ್​ಗೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ.

ಓಶಿವರಾ ಪೊಲೀಸರು ಅಂಧೇರಿಯ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಿ ಸಮ್ಮರಿ ರಿಪೋರ್ಟ್​ ಸಲ್ಲಿಸಿದ್ದು, ಪಾಟೇಕರ್​ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದ್ದಾರೆ.

ಡೆಪ್ಯುಟಿಪೊಲೀಸ್ ಕಮಿಷನರ್​ ಪರಂಜಿತ್ ಸಿಂಗ್ ದಾಹಿಯಾ ಈ ಬಗ್ಗೆ ಮಾಹಿತಿ ನೀಡಿ, ಆರೋಪಿ ಪeಟೇಕರ್​ ವಿರುದ್ಧ ನಮಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ ಅವರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿ, ವಶಕ್ಕೆ ಪಡೆಯಲಾಗದು ಎಂದಿದ್ದಾರೆ.

ತನುಶ್ರೀ ವಕೀಲ ನಿತಿನ್​ ಸತ್ಪುತೆ ಹೇಳಿದಂತೆ, ನಮಗಿನ್ನೂ ಈ ಬಗ್ಗೆ ಮಾಹಿತಿ ಇಲ್ಲ. ಪೊಲೀಸರು ಬಿ ಸಮ್ಮರಿ ವರದಿ ಸಲ್ಲಿಸಿದ ಮಾತ್ರಕ್ಕೆ ಪ್ರಕರಣ ಇಲ್ಲಿಗೆ ಮುಕ್ತಾಯ ಕಾಣಲ್ಲ. ಇದನ್ನು ಕೋರ್ಟ್​ನಲ್ಲಿ ನಾವು ಪ್ರಶ್ನಿಸುತ್ತೇವೆ. ಬೇರೆ ಮಾರ್ಗದಲ್ಲಿ ತನಿಖೆ ಮುಂದುವರೆಸಲು ಪೊಲೀಸರಿಗೆ ಸೂಚಿಸಲು ಮನವಿ ಮಾಡುತ್ತೇವೆ. ಆದರೆ ಪೊಲೀಸರು ಪಾಟೇಕರ್​ರನ್ನು ರಕ್ಷಿಸಲೆಂದೇ ಸರಿಯಾದ ಸಾಕ್ಷಿ ಕಲೆಹಾಕುತ್ತಿಲ್ಲ. ಬಾಂಬೆ ಹೈಕೋರ್ಟ್​ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.

ಕಳೆದ ವರ್ಷ ಅಕ್ಟೋಬರ್​​ನಲ್ಲಿ ನಾನಾ ಪಾಟೇಕರ್​ ವಿರುದ್ಧ ನಟಿ ತನುಶ್ರೀ ದತ್ತ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಹಾರ್ನ್ ಒಕೆ ಪ್ಲೀಸ್​ ಎಂಬ ಚಿತ್ರದ ಶೂಟಿಂಗ್ ವೇಳೆ ಪಾಟೇಕರ್​ ನನ್ನ ಜತೆ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ಮೀಟೂ ಅಭಿಯಾನದ ಮೂಲಕ ಹೇಳಿಕೆ ನೀಡಿದ್ದರು.

For All Latest Updates

TAGGED:

ABOUT THE AUTHOR

...view details