ನವದೆಹಲಿ :ಜೂನ್ 19ರಂದು ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ವ್ಯಕ್ತಿ ಮತ್ತು ಆತನ ಮಗನ ಸಾವಿಗೆ ಪ್ರಿಯಾಂಕಾ ಚೋಪ್ರಾ ಜೊನಾಸ್ ಶುಕ್ರವಾರ ಖಂಡನೆ ವ್ಯಕ್ತಪಡಿಸಿದ್ದಾರೆ.
ಟುಟಿಕೋರಿನ್ ಅಪ್ಪ, ಮಗ ಲಾಕ್ಅಪ್ ಡೆತ್ ಖಂಡಿಸಿ ಪ್ರಿಯಾಂಕ ಟ್ವೀಟ್.. - ಪ್ರಿಯಾಂಕಾ ಚೋಪ್ರಾ ಜೊನಾಸ್
ಪ್ರಸ್ತುತ ಅಮೆರಿಕದಲ್ಲಿ ಪತಿ ನಿಕ್ ಜೊನಸ್ ಅವರೊಂದಿಗೆ ಕಾಲ ಕಳೆಯುತ್ತಿರುವ 37 ವರ್ಷದ ನಟಿ ಪ್ರಿಯಾಂಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಟುಟಿಕೋರಿನ್ ಅಪ್ಪ, ಮಗ ಲಾಕ್ಅಪ್ ಡೆತ್ ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕೇಳಿಕೊಂಡಿದ್ದಾರೆ..

ಟುಟಿಕೋರಿನ್ ಅಪ್ಪ, ಮಗ ಲಾಕ್ಅಪ್ ಡೆತ್ ಖಂಡಿಸಿ ಪ್ರಿಯಾಂಕಾ ಟ್ವೀಟ್
ಪ್ರಸ್ತುತ ಅಮೆರಿಕದಲ್ಲಿ ಪತಿ ನಿಕ್ ಜೊನಸ್ ಅವರೊಂದಿಗೆ ಕಾಲ ಕಳೆಯುತ್ತಿರುವ 37 ವರ್ಷದ ನಟಿ ಪ್ರಿಯಾಂಕ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಟುಟಿಕೋರಿನ್ ಅಪ್ಪ, ಮಗ ಲಾಕ್ಅಪ್ ಡೆತ್ ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕೇಳಿಕೊಂಡಿದ್ದಾರೆ.
"ವಿಚಾರ ತಿಳಿದು ನಾನು ಸಂಪೂರ್ಣ ದಿಗ್ಭ್ರಮೆಗೊಂಡೆ, ನನಗೆ ದುಃಖದೊಂದಿಗೆ ಕೋಪವೂ ಬರುತ್ತಿದೆ. ಅಪರಾಧ ಎಂತದ್ದೇ ಆಗಿರಲಿ, ಯಾವುದೇ ಮನುಷ್ಯ ಕೂಡ ಅಂತಹ ಕ್ರೂರ ಶಿಕ್ಷೆಗೆ ಒಳಪಡಲು ಅರ್ಹನಲ್ಲ. ಅನ್ಯಾಯಕ್ಕೊಳಗಾಗಿರುವ ಕುಟುಂಬಸ್ಥರು ಎಷ್ಟು ನೋವು ಅನುಭವಿಸುತ್ತಿರಬಹುದು ಎಂಬುದನ್ನು ನನ್ನಿಂದ ಊಹಿಸಲೂ ಸಾಧ್ಯವಿಲ್ಲ" ಎಂದು ಜೊನಾಸ್ ಹೇಳಿದ್ದಾರೆ.