ಹೈದರಾಬಾದ್: ಬಾಲಿವುಡ್ ನಟ ವರುಣ್ ಧವನ್ ಅವರ ಬಾಲ್ಯದ ಗೆಳತಿ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರನ್ನು ಇದೇ 24ರಂದು ಮದುವೆಯಾಗಲಿದ್ದಾರೆ. ಆದರೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಕುಟುಂಬ ಸದಸ್ಯರು ಹೊರತಾಗಿ ಬೇರೆ ಯಾರಿಗೂ ಆಹ್ವಾನ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ವರುಣ್ - ನತಾಶ ಮದುವೆಗಿಲ್ಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ: ಕಾರಣ! - ಬಾಲಿವುಡ್ ನಟರ ವಿವಾಹ ಸಂಬಂಧಿತ ಸುದ್ದಿ
ಬಾಲಿವುಡ್ ನಟ ವರುಣ್ ಧವನ್ ಅವರ ಬಾಲ್ಯದ ಗೆಳತಿ ಮತ್ತು ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಅವರನ್ನು ವಿವಾಹವಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮೂಲಗಳು ತಿಳಿಸಿದೆ.
![ವರುಣ್ - ನತಾಶ ಮದುವೆಗಿಲ್ಲ ಬಾಲಿವುಡ್ ಸೆಲೆಬ್ರಿಟಿಗಳಿಗೆ ಆಹ್ವಾನ: ಕಾರಣ! Varun-Natasha wedding](https://etvbharatimages.akamaized.net/etvbharat/prod-images/768-512-10334945-986-10334945-1611296318105.jpg)
ಆದರೆ ವಿವಾಹಕ್ಕೆ ಆಹ್ವಾನಿಸದಿದ್ದರೂ, ರಿಸೆಪ್ಶನ್ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರಂತೆ. ವರದಿಗಳ ಪ್ರಕಾರ, ಮದುವೆ ಕಾರ್ಯಕ್ರಮದಲ್ಲಿ ಕುಟುಂಬ ಸುಮಾರು 40 ಜನರು ಸೇರುತ್ತಾರೆ. ಜನವರಿ 22 ರಿಂದ ಜನವರಿ 26ರವರೆಗೆ ಅಲಿಬಾಗ್‌ನ ರೆಸಾರ್ಟ್‌ನಲ್ಲಿ ಉಳಿದು ಬಳಿಕ ಮುಂಬೈಗೆ ಮರಳುತ್ತಾರೆ. ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳು ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಸೂಚಿಸುತ್ತಿವೆ.
ಮುಂಬೈ ಸಮೀಪದ ಅಲಿಬಾಗ್‌ನಲ್ಲಿ ಈ ಮದುವೆ ನಡೆಯಲಿದೆ. ಮುಂಬೈನಿಂದ ಸ್ಪೀಡ್ ಬೋಟ್ ಮೂಲಕ ಕೇವಲ 20 ನಿಮಿಷಗಳ ದೂರದಲ್ಲಿರುವ ಅಲಿಬಾಗ್‌ನ ದಿ ಮ್ಯಾನ್ಷನ್ ಹೌಸ್ ರೆಸಾರ್ಟ್‌ನಲ್ಲಿ ನಟ ತನ್ನ ದೀರ್ಘಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.