ಕರ್ನಾಟಕ

karnataka

ETV Bharat / sitara

ಬಾಲಿವುಡ್ ಖ್ಯಾತ ನಟನೊಂದಿಗೆ ವೆಬ್​ ಸೀರೀಸ್​​ನಲ್ಲಿ ನಟಿಸಿರುವ ನಿತ್ಯಾ ಮೆನನ್​ - south indian actress Nitya menon

ದಕ್ಷಿಣ ಭಾರತದ ಖ್ಯಾತ ನಟಿ ನಿತ್ಯಾ ಮೆನನ್ ಈಗ ಬಾಲಿವುಡ್​​​ನಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಜೊತೆ 'ಮಿಷನ್ ಮಂಗಳ್' ಚಿತ್ರದಲ್ಲಿ ನಟಿಸಿದ್ದ ನಿತ್ಯಾ ಮೆನನ್ ಈಗ ಅಭಿಷೇಕ್ ಬಚ್ಚನ್ ಜೊತೆ ವೆಬ್​ ಸಿರೀಸ್​​​ನಲ್ಲಿ ನಟಿಸಿದ್ದಾರೆ.

NItya menon in web series
ನಿತ್ಯಾ ಮೆನನ್

By

Published : Jul 4, 2020, 3:30 PM IST

'ಸೆವೆನ್ ಒ ಕ್ಲಾಕ್' ಚಿತ್ರದ ಮೂಲಕ ಸ್ಯಾಂಡಲ್​ವುಡ್​​ನಲ್ಲಿ ವೃತ್ತಿ ಬದುಕನ್ನು ಆರಂಭಿಸಿ ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಹೆಸರು ಮಾಡಿರುವ ನಿತ್ಯಾ ಮೆನನ್ ಮತ್ತೆ ಸುದ್ದಿಯಲಿದ್ದಾರೆ.

ಕೆಲವು ದಿನಗಳ ಹಿಂದೆ ನಿತ್ಯಾ ಮೆನನ್, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದರು. ದಪ್ಪ ಆಗುವುದು, ಸಣ್ಣ ಆಗುವುದು ಅವರವರಿಗೆ ಬಿಟ್ಟ ವಿಚಾರ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದು ತಪ್ಪು. ದಪ್ಪ ಆಗಿದ್ದೇನೆ ಎಂದು ಕೆಟ್ಟದಾಗಿ ಕಮೆಂಟ್ ಮಾಡುವವರೇ ಹೆಚ್ಚು, ಆದರೆ ಯಾವ ಕಾರಣಕ್ಕೆ ಹೀಗಾದೆ ಎಂದು ಯಾರೂ ಕೇಳುವುದಿಲ್ಲ. ಏನೋ ಕಾಯಿಲೆ ಇದೆ ಎನ್ನುವಂತೆ ಎಲ್ಲರೂ ಮಾತನಾಡುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರದ ಮೂಲಕ ಕೆಲವು ದಿನಗಳ ಹಿಂದೆ ನಿತ್ಯಾ ಸುದ್ದಿಯಲ್ಲಿದ್ದರು.

ಇದೀಗ ನಿತ್ಯಾ ವೆಬ್ ಸೀರೀಸ್​ನಲ್ಲಿ ನಟಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 'ಬ್ರೀತ್' ಸೀರೀಸ್ ಸೀಸನ್​​​​​​ 2 ರಲ್ಲಿ 'ಇನ್​​ ಟು ದಿ ಶಾಡೋಸ್' ನಲ್ಲಿ ನಿತ್ಯಾ ಮೆನನ್ ಅಭಿಷೇಕ್​ ಬಚ್ಚನ್ ಹಾಗೂ ಅಮೀತ್ ಸಾಧ್ ಜೊತೆ ಅಭಿನಯಿಸಿದ್ದಾರೆ. ಈ ಸೀರೀಸ್​​ನಲ್ಲಿ ನಿತ್ಯಾ, ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜುಲೈ 10 ರಂದು ಈ ಸೀರೀಸ್ ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಈ ಸೀರೀಸ್​​ನ ಟ್ರೇಲರ್ ಬಿಡುಗಡೆಯಾಗಿದ್ದು ಭಾರೀ ಕುತೂಹಲ ವ್ಯಕ್ತವಾಗಿದೆ. ನಿತ್ಯಾ ಮೆನನ್ 'ಮಿಷನ್ ಮಂಗಳ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ನಟಿಸಿ ಗಮನ ಸೆಳೆದಿದ್ದರು. ಇದೀಗ ಅಭಿಷೇಕ್ ಜೊತೆ ನಟಿಸುವ ಮೂಲಕ ಸುದ್ದಿಯಲಿದ್ದಾರೆ.

ABOUT THE AUTHOR

...view details