ಮುಂಬೈ:ಬಚ್ಚನ್ಪಾಂಡೆ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ಕುಮಾರ್ ಅವರನ್ನು ರೌದ್ರವಾಗಿ ತೋರಿಸಿದ್ದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾದ ಟ್ರೇಲರ್ ಬಿಡುಗಡೆಗೂ ಮುನ್ನ ಪೋಸ್ಟರ್ ಅನ್ನು ಕೈಬಿಡಲಾಗಿದೆ.
ಪೋಸ್ಟರ್ನಲ್ಲಿ ಅಕ್ಷಯ್ಕುಮಾರ್ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಕಣ್ಣು, ರೌದ್ರ ಮುಖ, ಕೈಯಲ್ಲಿ ಬಂದೂಕು ಮತ್ತು ತಲೆಗೆ ರುಮಾಲು ಸುತ್ತಿಕೊಂಡಿದ್ದಾರೆ. ಈ ಪೋಸ್ಟರ್ಗೆ ಅಕ್ಷಯ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಈ ಪೋಸ್ಟರ್ ಅನ್ನು ಕೈಬಿಟ್ಟಿದ್ದಾರೆ.
ಇದಲ್ಲದೇ, ಅಕ್ಷಯ್ಕುಮಾರ್ ಕೂಡ ತಮ್ಮ ಬಚ್ಚನ್ಪಾಂಡೆ ಸಿನಿಮಾದ ಮಾಹಿತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, 'ಇದು ಎಲ್ಲ ಪಾತ್ರಗಳಿಗಿಂತ ವಿಶೇಷವಾಗಿದೆ. ಬಚ್ಚನ್ಪಾಂಡೆ ನಿಮ್ಮನ್ನು ನಗಿಸಲು, ಅಳಿಸಲು, ಹೆದರಿಸಲು ಬರುತ್ತಿದ್ದಾನೆ. ಇದೇ 18 ರಂದು ಟ್ರೈಲರ್ ಬಿಡುಗಡೆಯಾಗಲಿದೆ. ಹರಸಿ ಹಾರೈಸಿ' ಎಂದು ಬರೆದುಕೊಂಡಿದ್ದಾರೆ.
ಬಚ್ಚನ್ಪಾಂಡೆ ಸಿನಿಮಾದಲ್ಲಿ ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್, ಅರ್ಷದ್ ವಾರ್ಸಿ, ಪಂಕಜ್ ತ್ರಿಪಾಠಿ, ಪ್ರತೀಕ್ ಬಬ್ಬರ್ ಮತ್ತು ಅಭಿಮನ್ಯು ಸಿಂಗ್ ನಟಿಸಿದ್ದಾರೆ.
ಓದಿ:ನಾನು ಭಾರತದ ದೊಡ್ಡ ಅಭಿಮಾನಿ, ತಾಜ್ಮಹಲ್ ನೋಡಲು ಬಯಸುತ್ತೇನೆ : ಟಾಮ್ ಹಾಲೆಂಡ್