ಇದೇ ವರ್ಷ ಅಕ್ಟೋಬರ್ 24 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಅಮ್ಮನಾದ ಖಷಿಯಲ್ಲಿದ್ದಾರೆ. ಬೇಬಿ ಬಂಪ್ ಫೋಟೋವನ್ನು ನೇಹಾ ಹಾಗೂ ಪತಿ ರೋಹನ್ ಪ್ರೀತ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಹಾಗೂ ಬಾಲಿವುಡ್ ಗಣ್ಯರು ಈ ದಂಪತಿಗೆ ಶುಭ ಕೋರಿದ್ದಾರೆ.
ನೇಹಾ ಕಕ್ಕರ್ ಬಾಲಿವುಡ್ನಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಕೆಜಿಎಫ್ 1' ಹಿಂದಿ ವರ್ಷನ್ನಲ್ಲಿ 'ಗಲಿ ಗಲಿ ಮೇ...'ಹಾಡನ್ನು ನೇಹಾ ಹಾಡಿದ್ದಾರೆ. ರೋಹನ್ ಅವರನ್ನು ಮದುವೆಯಾಗುವ ಮುನ್ನ ನೇಹಾ ಕಕ್ಕರ್ ಹಿಮಾಂಶ್ ಕೊಹ್ಲಿ ಅವರೊಂದಿಗೆ ರಿಲೇಶನ್ಶಿಪ್ನಲ್ಲಿದ್ದರು. ನಂತರ ರೋಹನ್ ಅವರೊಂದಿಗೆ ಡೇಟಿಂಗ್ ಆರಂಭಿಸಿದ ನೇಹಾ ಮದುವೆಯಾಗುವ ಕೆಲವು ದಿನಗಳ ಹಿಂದಷ್ಟೇ ತಮ್ಮ ಸಂಬಂಧದ ಬಗ್ಗೆ ರಿವೀಲ್ ಮಾಡಿ ಇಬ್ಬರೂ ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಅಕ್ಟೋಬರ್ 24 ರಂದು ಈ ಜೋಡಿ ದೆಹಲಿಯಲ್ಲಿ ಮದುವೆಯಾಗಿ ಹನಿಮೂನ್ಗೆ ದುಬೈಗೆ ತೆರಳಿತ್ತು. ಇದೀಗ ಮದುವೆಯಾಗಿ 2 ತಿಂಗಳ ನಂತರ ಈ ಜೋಡಿ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದೆ.