ಕರ್ನಾಟಕ

karnataka

ETV Bharat / sitara

ಚಿಕ್ಕ ವಯಸ್ಸಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ಆತ್ಮಕಥೆಯಲ್ಲಿ ಕರಾಳ ಘಟನೆ ಬಿಚ್ಚಿಟ್ಟ ನೀನಾ ಗುಪ್ತಾ..! - ಸಚ್ ಕಹುನ್ ತೋ

ಚಿಕ್ಕವಯಸ್ಸಲ್ಲೇ ನಾನು ವೈದ್ಯರು ಮತ್ತು ಟೈಲರ್​ನಿಂದ ಲೈಂಗಿಕ ಕಿರುಕುಳ ಎದುರಿಸಿದ್ದೇನೆ ಎಂದು ನಟಿ ನೀನಾ ಗುಪ್ತಾ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ನೀನಾ ಗುಪ್ತಾ
ನೀನಾ ಗುಪ್ತಾ

By

Published : Oct 18, 2021, 10:39 PM IST

ಇತ್ತೀಚಿನ ದಿನಗಳಲ್ಲಿ ನಟಿಯರು ಕಾಸ್ಟಿಂಗ್‌ ಕೌಚ್‌ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಆದರೀಗ ನಟಿ ನೀನಾ ಗುಪ್ತಾ ತಾನು ವೈದ್ಯರು ಹಾಗೂ ಟೈಲರ್​ನಿಂದ ಲೈಂಗಿಕ ಕಿರುಕುಳ ಎದುರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ನೀನಾ ಗುಪ್ತಾ ತನ್ನ ಆತ್ಮಕಥೆ ‘ಸಚ್ ಕಹುನ್ ತೋ’ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ನಟಿ ನೀನಾ ಗುಪ್ತಾ ತನ್ನ ಜೀವನದುದ್ದಕ್ಕೂ ಅನುಭವಿಸಿದ್ದ ಯಾತನೆಯನ್ನು ತನ್ನ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ತಾನು ಎಷ್ಟೊಂದು ಕೆಟ್ಟ ಸನ್ನಿವೇಶಗಳನ್ನು ಎದುರಿಸಿದ್ದೇನೆ ಅನ್ನೋದನ್ನು ಎಳೆ ಎಳೆಯಾಗಿ ಬರೆದುಕೊಂಡಿದ್ದಾರೆ. ಒಮ್ಮೆ ಕಣ್ಣಿನ ಪರೀಕ್ಷೆಗಾಗಿ ವೈದ್ಯರ ಬಳಿಗೆ ತೆರಳಿದ್ದೆ. ವೈದ್ಯರು ತನ್ನ ಕಣ್ಣನ್ನು ಪರೀಕ್ಷಿಸಿದ್ದ ನಂತರ ಇತರ ಅಂಗಗಳನ್ನೂ ಪರೀಕ್ಷಿಸಿದ್ದಾರೆ. ಈ ವೇಳೆಯಲ್ಲಿ ನಾನು ತುಂಬಾ ಹೆದರಿದ್ದೆ. ಮನೆಗೆ ಹೋಗುವವರೆಗೂ ವೈದ್ಯರು ಮಾಡಿದ ಘಟನೆ ಅಸಹ್ಯ ಮೂಡಿಸಿತ್ತು.

ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾನು ಒಬ್ಬಂಟಿಯಾಗಿ ಘಟನೆಯನ್ನು ನೆನೆದು ಕಣ್ಣೀರು ಹಾಕುತ್ತಿದ್ದೆ. ನನ್ನ ತಾಯಿಯ ಬಳಿಯೂ ಈ ವಿಚಾರವನ್ನು ಹೇಳಿಕೊಂಡಿರಲಿಲ್ಲ. ಒಂದು ವೇಳೆ ಹೇಳಿಕೊಂಡರೆ, ಅವರು ನನ್ನನ್ನು ಪ್ರಶ್ನಿಸುತ್ತಾರೆ ಎಂಬ ಭಯ ನನ್ನ ಆವರಿಸಿತ್ತು ಎಂದಿದ್ದಾರೆ.

ಟೈಲರ್‌ಗಳ ಬಳಿಯಲ್ಲಿಯೂ ಇಂತಹ ಕೆಟ್ಟ ಅನುಭವ ನನಗಾಗಿದೆ. ನಾನು ಸುಂದರವಾಗಿ ಇರುವುದನ್ನು ಹಲವು ಬಾರಿ ಟೈಲರ್‌ ದುರುಪಯೋಗ ಪಡಿಸಿಕೊಂಡಿದ್ದಾರೆ. ತನ್ನ ಅಳತೆಯನ್ನು ತೆಗೆದುಕೊಳ್ಳುವ ವೇಳೆ ಅವರು ನನಗೆ ಕಿರುಕುಳ ನೀಡಿದ್ದಾರೆ. ಆದರೆ, ಈ ವಿಚಾರವನ್ನೂ ನನ್ನ ತಾಯಿಯ ಬಳಿ ಹೇಳಿಕೊಂಡಿರಲಿಲ್ಲ ಎಂದು ಅವರು ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ಖ್ಯಾತ ನಟಿ ನೀನಾ ಗುಪ್ತಾ ಅವರ ಆತ್ಮಚರಿತ್ರೆ ‘ಸಚ್ ಕಹುನ್ ತೋ’ ಅನ್ನು ಕರೀನಾ ಕಪೂರ್ ಖಾನ್ ಜೂನ್ 14 ರಂದು ಬಿಡುಗಡೆ ಮಾಡಿದ್ದರು. ಆತ್ಮಕಥೆಯಲ್ಲಿ ತನ್ನ ಸಿನಿಮಾದ ಜೀವನದ ಎಲ್ಲಾ ವಿಚಾರಗಳನ್ನೂ ನೀನಾ ಗುಪ್ತಾ ಬರೆದುಕೊಂಡಿದ್ದಾರೆ.

ABOUT THE AUTHOR

...view details