ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವ ಡ್ರಗ್ಸ್ ಜಾಲದಲ್ಲಿ ಬಗೆದಷ್ಟು ಮಾಹಿತಿ ಹೊರ ಬರುತ್ತಿದೆ. ಪ್ರಕರಣ ಸಂಬಂಧ ತನಿಖೆ ಚರುಕುಗೊಳಿಸಿರುವ ಮಾದಕ ವಸ್ತು ನಿಯಂತ್ರಣ ದಳ(ಎನ್‌ಸಿಬಿ) ಡ್ರಗ್ಸ್ ಪೆಡ್ಲಿಂಗ್ ಆರೋಪದಲ್ಲಿ ಅನೂಜ್ ಕೇಶ್ವಾನಿಯನ್ನು ಅರೆಸ್ಟ್ ಮಾಡಿದೆ. ಬಂಧಿತನಿಂದ ಗಾಂಜಾ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದೆ.
ನಟ ಸುಶಾಂತ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಅರೆಸ್ಟ್ - ಕೈಜನ್ ಇಬ್ರಾಹಿಂ
ಮಾದಕ ವಸ್ತು ನಿಯಂತ್ರಣ ದಳ ಡ್ರಗ್ಸ್ ಪೆಡ್ಲಿಂಗ್ ಆರೋಪದಲ್ಲಿ ಮುಂಬೈನಲ್ಲಿ ಅನೂಜ್ ಕೇಶ್ವಾನಿಯನ್ನ ಬಂಧಿಸಲಾಗಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ಕೈಜನ್ ಇಬ್ರಾಹಿಂ ಮಾಹಿತಿ ಆಧರಿಸಿ ಅನೂಜ್‌ನನ್ನು ಎನ್‌ಸಿಬಿ ಅರೆಸ್ಟ್ ಮಾಡಲಾಗಿದೆ.
ನಟ ಸುಶಾಂತ್ ಆತ್ಮಹತ್ಯೆ ಕೇಸಲ್ಲಿ ಬಗೆದಷ್ಟು ಮಾಹಿತಿ; ಮತ್ತೊಬ್ಬ ಆರೋಪಿ ಬಂಧನ
ಈ ಹಿಂದೆ ಬಂಧಿತನಾಗಿದ್ದ ಕೈಜನ್ ಇಬ್ರಾಹಿಂ ವಿಚಾರಣೆ ವೇಳೆ ಅನೂಜ್ ಕೇಶ್ವಾನಿ ಹೆಸರನ್ನು ಬಾಯ್ಬಿಟ್ಟಿದ್ದ. ಈತನ ಮಾಹಿತಿ ಆಧರಿಸಿ ಎನ್‌ಸಿಬಿ ಕೇಶ್ವಾನಿಯನ್ನು ಬಂಧಿಸಿದೆ. ಈಗಾಗಲೇ ಅರೆಸ್ಟ್ ಆಗಿರುವ ಕೈಜನ್‌ನನ್ನು ಸೆಪ್ಟೆಂಬರ್ 19ರವರೆಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಅನೂಜ್ ಕೇಶ್ವಾನಿಯನ್ನು ಕೋರ್ಟ್‌ಗೆ ಹಾಜರುಪಡಿಸಿದ ನಂತರ ಎನ್‌ಸಿಬಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.