ಹೈದರಾಬಾದ್:ತಮಿಳಿನ 'ಮಾನಾಡು' ಚಿತ್ರದ ತೆಲುಗು ರಿಮೇಕ್‌ಗಾಗಿ ಅಕ್ಕಿನೇನಿ ನಾಗ ಚೈತನ್ಯ ಮಾತುಕತೆ ನಡೆಸುತ್ತಿದ್ದಾರೆ. ಸುದ್ದಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾಗಿದ್ರೂ ಸಿಂಬು ಅವರ ಇತ್ತೀಚಿನ ಹಿಟ್ ಚಿತ್ರದ ರಿಮೇಕ್‌ನಲ್ಲಿ ನಾಗ ಚೈತನ್ಯ ಮುಖ್ಯ ಪಾತ್ರದಲ್ಲಿ ನಟಿಸುವುದು ಖಚಿತ ಎಂದು ಟಾಲಿವುಡ್ನಲ್ಲಿ ಸುದ್ದಿ ಹರಿದಾಡುತ್ತಿದೆ.
ವೆಂಕಟ್ ಪ್ರಭು ನಿರ್ದೇಶನದ 'ಮಾನಾಡು' ಚಿತ್ರದಲ್ಲಿ ಸಿಲಂಬರಸನ್ (ಸಿಂಬು) ಮತ್ತು ಎಸ್.ಜೆ. ಸೂರ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದರು. ಈ ಚಿತ್ರದ ಹಕ್ಕುಗಳನ್ನು ಪ್ರಮುಖ ಟಾಲಿವುಡ್ ನಿರ್ಮಾಣ ಸಂಸ್ಥೆ ಸುರೇಶ್ ಪ್ರೊಡಕ್ಷನ್ಸ್ ಖರೀದಿಸಿದೆ.
ಸುರೇಶ್ ಪ್ರೊಡಕ್ಷನ್ಸ್ ನಾಗ ಚೈತನ್ಯ ಅವರ ತಾಯಿಯ ಚಿಕ್ಕಪ್ಪ ದಗ್ಗುಬಾಟಿ ಸುರೇಶ್ ಅವರ ಒಡೆತನದಲ್ಲಿರುವುದರಿಂದ ನಿರ್ಮಾಣ ತಂಡವು 'ಬಂಗಾರ್ರಾಜು' ನಟನನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಗಾಳ ಹಾಕಿದೆ ಎನ್ನಲಾಗಿದೆ. ಕಥೆಯ ನಿರೂಪಣೆಯನ್ನು ಕೇಳಿದ ನಂತರ ಚೈತನ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಪ್ರೊಡಕ್ಷನ್ ಹೌಸ್‌ನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಓದಿ:ಸ್ವಇಚ್ಛೆಯಿಂದ ಸ್ನೇಹಿತ ಇಬ್ರಾಹಿಂ ನೋವನ್ನು ಆಲಿಸಲು ಬಂದಿದ್ದೇನೆ: ಎಸ್. ಆರ್. ಪಾಟೀಲ್