ಕರ್ನಾಟಕ

karnataka

ETV Bharat / sitara

ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ ಅಭಿಮಾನಿಗಳಿಗೆ ಬಿಗ್​ - ಬಿ ಹೇಳಿದ್ದೇನು? - amitabh bachchan latest news

ಕೋವಿಡ್​-19ಕ್ಕೆ ಒಳಗಾಗಿರುವ ಅಮಿತಾಬ್​ ಬಚ್ಚನ್​​ ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕು ಎಂದು ಹಾರೈಸಿದ ಲಕ್ಷಾಂತರ ಅಭಿಮಾನಿಗಳಿಗೆ, ಬಿಗ್​-ಬಿ ಕೃತಜ್ಞತೆ ತುಂಬಿದ ಸಂದೇಶವೊಂದನ್ನು ಟ್ವೀಟ್​​​ನಲ್ಲಿ ಪೋಸ್ಟ್ ಮಾಡಿದ್ದಾರೆ.

Amitabh Bachchan
ಅಮಿತಾಬ್​ ಬಚ್ಚನ್​

By

Published : Jul 17, 2020, 1:17 PM IST

ಮುಂಬೈ: ಮುಂಬೈನ ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್​ಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್​ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಅಭಿಮಾನಿಗಳಿಗೆ ಟ್ವೀಟ್​​ ಮೂಲಕ ಸಂದೇಶವೊಂದನ್ನು ರವಾನಿಸಿದ್ದಾರೆ.

ಅಮಿತಾಬ್​ ಬಚ್ಚನ್​ ಮತ್ತು ಅವರ ಕುಟುಂಬ ಆದಷ್ಟು ಬೇಗನೆ ಚೇತರಿಕೆಯಾಗಲಿ ಎಂದು ದೇಶಾದ್ಯಂತ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ನೋಡಿ ಭಾವುಕರಾಗಿರುವ ಅಮಿತಾಬ್​​, ನಿಮ್ಮ ಎಲ್ಲ ಆಶೀರ್ವಾದವನ್ನು ನಾನು ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

ಸಂದೇಶಗಳು (ಎಸ್​ಎಂಎಸ್​​), ವಾಟ್ಸ್​​ಆ್ಯಪ್​​, ಇನ್​​ಸ್ಟಾಗ್ರಾಂ ಮತ್ತು ಫೇಸ್​​ಬುಕ್​ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಆರೋಗ್ಯ ವೃದ್ಧಿಗೆ ನಿಮ್ಮ ಎಲ್ಲ ಆಶೀರ್ವಾದ, ಪ್ರೀತಿ ಮತ್ತು ಸಲ್ಲಿಸಿರುವ ಪ್ರಾರ್ಥನೆಗಳನ್ನು ನಾನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

’’ನಿಮ್ಮ ಪ್ರೀತಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮ ಅಭಿಮಾನಕ್ಕೆ ಎಂದಿಗೂ ನಾ ಋಣಿ. ಆಸ್ಪತ್ರೆಯ ಪ್ರೋಟೋಕಾಲ್​​​ಗೆ ನಿರ್ಬಂಧಿತನಾಗಿದ್ದೇನೆ. ಹೀಗಾಗಿ, ಇನ್ನೂ ಹೆಚ್ಚು ಹೇಳಲು ಸಾಧ್ಯವಿಲ್ಲ. ಲವ್​​ ಯೂ’’ಎಂದು ಹೇಳಿರುವ ಅವರು, ಮತ್ತೊಂದು ಪೋಸ್ಟ್​​ನಲ್ಲಿ ದೇವರ ಚಿತ್ರವೊಂದನ್ನು ಹಾಕಿ, ನಾನು ದೇವರಿಗೆ ಶರಣಾಗಿದ್ದೇನೆ ಎಂದಿದ್ದಾರೆ.

ಬಿಗ್ ಬಿ ಜೊತೆಗೆ, ಮಗ & ನಟ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್​ಗೂ ಕೊರೊನಾ ದೃಢಪಟ್ಟಿದೆ. ಅಮಿತಾಬ್ ಬಚ್ಚನ್​ ಪತ್ನಿ ವರದಿ ನೆಗಟಿವ್​ ಬಂದಿದೆ.

ABOUT THE AUTHOR

...view details