ಕರ್ನಾಟಕ

karnataka

ETV Bharat / sitara

ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್: ಬಾಲಿವುಡ್ ನಟಿ ರಿಚಾ ಚಡ್ಡಾ - ಇನ್​ಸೈಡ್ ಎಡ್ಜ್ ಬಿಡುಗಡೆ

ರಾಹುಲ್ ದ್ರಾವಿಡ್ ಮತ್ತೆ ಟೀಂ ಇಂಡಿಯಾ ಕೋಚ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಕ್ರಿಕೆಟ್ ಮೇಲಿನ ಆಸಕ್ತಿ ಹೆಚ್ಚಾಗಿದೆ. ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ (First love Rahul Dravid) ಎಂದು ರಿಚಾ ಚಡ್ಡಾ ಹೇಳಿದ್ದಾರೆ.

'My first love is Rahul Dravid': Richa Chadha
'My first love is Rahul Dravid': Richa Chadha

By

Published : Nov 24, 2021, 7:27 AM IST

ಮುಂಬೈ:Inside Edge -ಬಾಲಿವುಡ್ ನಟಿ ರಿಚಾ ಚಡ್ಡಾ ಕಳೆದ ಎರಡು ವರ್ಷಗಳಿಂದ ಇನ್​ಸೈಡ್ ಎಡ್ಜ್ ಎಂಬ ವೆಬ್​ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ವೆಬ್ ಸಿರೀಸ್​ನ ಮೂರನೇ ಸೀಸನ್​ನ ಪ್ರಚಾರದ ನಿಮಿತ್ತ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಮೊದಲ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ.

ಹೌದು, ನಾನು ಚಿಕ್ಕ ವಯಸ್ಸಿನಲ್ಲಿ ನಾನು ಕ್ರಿಕೆಟ್ ಆಟವನ್ನು ಅಷ್ಟಾಗಿ ನೋಡುತ್ತಿರಲಿಲ್ಲ. ನನ್ನ ಸಹೋದರ ಆಗ ಕ್ರಿಕೆಟ್ ಆಡುತ್ತಿದ್ದನು. ಆದರೂ ಟಿವಿಯಲ್ಲಿ ಕ್ರಿಕೆಟ್​ ಪಂದ್ಯ ಪ್ರಸಾರವಾಗುವ ವೇಳೆ ನಾನು ನೋಡುತ್ತಿದ್ದೆ. ರಾಹುಲ್ ದ್ರಾವಿಡ್ ಅವರ ಆಟವನ್ನು ನಾನು ಇಷ್ಟಪಟ್ಟಿದ್ದೆ. ಅವರು ಔಟ್​ ಆದಾಗ ನಾನು ಪಂದ್ಯ ನೋಡುವುದನ್ನು ನಿಲ್ಲಿಸುತ್ತಿದ್ದೆನು. ನನ್ನ ಮೊದಲ ಪ್ರೀತಿ ರಾಹುಲ್ ದ್ರಾವಿಡ್ ಎಂದು ರಿಚಾ ಚಡ್ಡಾ ಹೇಳಿದ್ದಾರೆ.

ಈಗ ರಾಹುಲ್ ದ್ರಾವಿಡ್ ಮತ್ತೆ ಟೀಂ ಇಂಡಿಯಾ ಕೋಚ್ ಆಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಇದರಿಂದಾಗಿ ಕ್ರಿಕೆಟ್ ಮೇಲೆ ನನ್ನ ಆಸಕ್ತಿ ಮರಳಿದೆ. ನಾನು ಮತ್ತೆ ಕ್ರಿಕೆಟ್ ನೋಡುತ್ತೇನೆ ಎಂದು ರಿಚಾ ಚಡ್ಡಾ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಇನ್ನು ರಿಚಾ ಚಡ್ಡಾ ವೆಬ್ ಶೋ ಮಾತ್ರವಲ್ಲದೇ ಚಲನಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಲವೊಂದು ಸಿನಿಮಾಗಳು ಬಿಡುಗಡೆಯ ಹಂತದಲ್ಲಿದ್ದು, ಈಗಿನ ಇನ್​ಸೈಡ್ ಎಡ್ಜ್ ವೆಬ್ ಸಿರೀಸ್ ಕ್ರಿಕೆಟ್ ಆಟದ ತೆರೆಯ ಹಿಂದೆ ನಡೆಯುವ ಭ್ರಷ್ಟಾಚಾರ, ರಾಜಕೀಯವನ್ನು ಅನಾವರಣಗೊಳಿಸುವ ಕಥಾಹಂದರವನ್ನು ಒಳಗೊಂಡಿದೆ. ಇತ್ತೀಚೆಗಷ್ಟೇ ವೆಬ್​ಸಿರೀಸ್​ನ ಟ್ರೇಲರ್ ಬಿಡುಗಡೆಯಾಗಿತ್ತು.

ಇದನ್ನೂ ಓದಿ:ಭಾರತೀಯ ಆಟಗಾರರಿಗೆ ಹಲಾಲ್​ ಮಾಂಸ ಕಡ್ಡಾಯಗೊಳಿಸಿ ಬಿಕ್ಕಟ್ಟಿಗೆ ಸಿಲುಕಿದ ಬಿಸಿಸಿಐ

ABOUT THE AUTHOR

...view details