ಮುಂಬೈ: ಬ್ಲೂ ಫಿಲಂ ದಂಧೆ ಪ್ರಕರಣ ಸಂಬಂಧ ಉದ್ಯಮಿ ಹಾಗೂ ಬಾಲಿವುಟ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹಾಗೂ ರಿಯಾನ್ ಥಾರ್ಪ್ ಅವರ ಜಾಮೀನು ಮನವಿಯನ್ನು ಮುಂಬೈನ ಎಸ್‌ಪ್ಲಾನೇಡ್ ಕೋರ್ಟ್ ತಿರಸ್ಕರಿಸಿದೆ.
ಬಾಂಬೆ ಹೈಕೋರ್ಟ್, ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಬ್ಲೂ ಫಿಲಂ ದಂಧೆ ಪ್ರಕರಣದಲ್ಲಿ ಕುಂದ್ರಾ ಅವರ ನಾಲ್ವರು ನೌಕರರು ಸಾಕ್ಷಿಗಳಾಗಿದ್ದಾರೆ ಎಂದು ಪೊಲೀಸರು ಕಳೆದ ಭಾನುವಾರ ಮಾಹಿತಿ ನೀಡಿದ್ದರು.