ಹೈದರಾಬಾದ್:ಕೆಜಿಎಫ್ ಚಾಪ್ಟರ್ 1ರಲ್ಲಿ ‘ಗಲಿ ಗಲಿ..’ ಹಾಡಿಗೆ ಆಕರ್ಷಕವಾಗಿ ಸೊಂಟ ಬಳುಕಿಸಿದ್ದ ಬಾಲಿವುಡ್ನ ಕಿರುತೆರೆ ನಟಿ ಮೌನಿ ರಾಯ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಕೆಜಿಎಫ್ ಸಿನಿಮಾದಲ್ಲಿ ಅದ್ಭುತ ಡ್ಯಾನ್ಸ್ ಮೂಲಕ ಗಮನ ಸೆಳೆದಿರುವ ಇವರು ಇತ್ತೀಚೆಗೆ ತಮ್ಮ 36ನೇ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಗೋವಾದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದರು.
ಮೌನಿ ರಾಯ್ 2022ಕ್ಕೆ ದುಬೈ ಮೂಲದ ಸೂರಜ್ ನಂಬಿಯಾರ್ ಎಂಬ ಉದ್ಯಮಿ ಜೊತೆ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಮೌನಿ ಸೋದರ ಸಂಬಂಧಿ ರಾಯ್ ಸರ್ಕಾರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ನಟಿ ಮೌನಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೌನಿ ತಮ್ಮ ಕನಸಿನ ಹುಡುಗನ ಜೊತೆಗಿನ ಯಾವುದೇ ಫೋಟೋವನ್ನು ಇದುವರೆಗೂ ಹಂಚಿಕೊಂಡಿಲ್ಲ.
'ನಾಗಿನ್' ಎಂಬ ಧಾರಾವಾಹಿಯು ಮೌನಿ ರಾಯ್ಗೆ ದೊಡ್ಡಮಟ್ಟದ ಜನಪ್ರೀಯತೆ ತಂದುಕೊಟ್ಟಿತ್ತು. ಬಳಿಕ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತಷ್ಟು ಪ್ರಚಲಿತಗೊಂಡರು. ನಟ ಅಕ್ಷಯ್ ಕುಮಾರ್ ಜೊತೆ 'ಗೋಲ್ಡ್' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು.