ನಾಗಿಣಿ, ಕೆಜಿಎಫ್ ಹಾಟ್ ಹುಡುಗಿ ಮೌನಿ ರಾಯ್ ಕಳೆದ ಮೂರು ತಿಂಗಳಿಂದ ತಮ್ಮ ಬಾಲ್ಯದ ಸ್ನೇಹಿತೆಯ ಮನೆಯಲ್ಲಿ ನೆಲೆಸಿದ್ದಾರೆ. ದುಬೈನ ಅಬುದಾಬಿಯಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಇಂಡಿಯಾವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಮನೆಗೆ ವಾಪಸ್ ಬರಬೇಕು ಎಂದು ಹಂಬಲಿಸುತ್ತಿದ್ದಾರಂತೆ.
ದೂರವಾಣಿ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿದ ಮೌನಿ ರಾಯ್, ಬಾಲ್ಯದ ಸ್ನೇಹಿತೆಯೊಂದಿಗೆ ನಾನು ಇಲ್ಲಿ ಬಹಳ ಎಂಜಾಯ್ ಮಾಡುತ್ತಿದ್ದೇನೆ. ನಾನು ಚಿಕ್ಕಂದಿನಿಂದ ನನ್ನ ಗೆಳತಿ ಹಾಗೂ ಅವರ ಕುಟುಂಬದವರೊಂದಿಗೆ ಹೆಚ್ಚು ಬೆಳೆದದ್ದು. ಆದರೆ ಪಶ್ಚಿಮ ಬಂಗಾಳದಲ್ಲಿ ನೆಲೆಸಿರುವ ನನ್ನ ಅಮ್ಮ ಹಾಗೂ ಸೋದರನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇಂಡಿಯಾಗೆ ವಾಪಸ್ ಬರಬೇಕು ಎನ್ನಿಸುತ್ತಿದೆ. ಆದರೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಎಲ್ಲೆಡೆ ಕೊರೊನಾ ಭೀತಿ ಆರಂಭವಾಗಿರುವುದರಿಂದ ಮನೆ ಸಾಮಾನುಗಳನ್ನು ತರಲು ಮಾತ್ರ ಹೊರ ಹೊಗುತ್ತಿದ್ದೇವೆ ಹೊರತು ನನಗೆ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲ. ನಾನು ಇಲ್ಲಿ ಸೇಫ್ ಆಗಿದ್ದೇನೆ . ಈ ಬಿಡುವಿನ ವೇಳೆ ಪಶ್ಚಿಮ ಬಂಗಾಳದ ಅಡುಗೆಯನ್ನು ಕಲಿಯುತ್ತಿದ್ದೇನೆ. ಇದಕ್ಕೂ ಮುನ್ನ ನಾನು ಅಡುಗೆ ಮನೆಗೆ ಕಾಲಿಟ್ಟಿದ್ದೇ ಇಲ್ಲ ಎಂದು ಮೌನಿ ರಾಯ್ ಹೇಳಿಕೊಂಡಿದ್ದಾರೆ. ಬೆಂಗಾಳಿ ಎಗ್ ಕರ್ರಿ, ಬೆಗುನ್ ಪೋಸ್ತೋ, ಪೂಲ್ ಕೊಪಿರ್ ದಾಲ್ನಾ, ಬೆಂಗಾಳಿ ಸೋಯಾ ಬೀನ್ ಹಾಗೂ ಇನ್ನಿತರ ಅಡುಗೆಗಳನ್ನು ಕಲಿತಿದ್ದಾರಂತೆ ನಾಗಿಣಿ. ಅಡುಗೆ ಜೊತೆ ಜೊತೆಗೆ ಈ ನಟಿ ಆನ್ಲೈನ್ ಭಗವದ್ಗೀತೆ ಕ್ಲಾಸ್ಗೆ ಕೂಡಾ ಹಾಜರಾಗಿದ್ದರಂತೆ.
ಮೌನಿ ರಾಯ್ ಕರಿಯರ್ ವಿಚಾರಕ್ಕೆ ಬರುವುದಾದರೆ ರಣಬೀರ್ ಕಪೂರ್, ಆಲಿಯಾ ಭಟ್ ಅವರೊಂದಿಗೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡಾ ನಟಿಸಿದ್ದು ಕರಣ್ ಜೋಹರ್ ನಿರ್ಮಾಣದಲ್ಲಿ ಅಯ್ನಾ ಮುಖರ್ಜಿ ನಿರ್ದೇಶಿಸಲಿದ್ದಾರೆ.