ಕೆಜಿಎಫ್ ಹಿಂದಿ ವರ್ಷನ್ ನೋಡಿರುವವರಿಗೆ ಯಶ್ ಜೊತೆ ಹೆಜ್ಜೆ ಹಾಕಿದ್ದ ಮೌನಿರಾಯ್ ಖಂಡಿತ ನೆನಪಿದ್ದೇ ಇರುತ್ತಾರೆ. ಮೌನಿರಾಯ್ ಅಭಿನಯದ 'ನಾಗಿನ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದ್ದು ಇದೀಗ ಮೌನಿರಾಯ್ ಮೊದಲಿಗಿಂತ ಹೆಚ್ಚಾಗಿ ಕನ್ನಡಿಗರಿಗೆ ಪರಿಚಯ ಇದ್ದೇ ಇರುತ್ತಾರೆ.
ದುಬೈನಲ್ಲಿದ್ದುಕೊಂಡು ಹಾಟ್ ಫೋಟೋಗಳ ಮೂಲಕ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ - Bollywood actress Mouni roy
ಬಾಲಿವುಡ್ ನಟಿ ಮೌನಿ ರಾಯ್ ಸದ್ಯಕ್ಕೆ ದುಬೈನ್ ಅಬುದಾಬಿಯಲ್ಲಿ ನೆಲೆಸಿದ್ದಾರೆ. ಸ್ವಿಮ್ಮಿಂಗ್ ಪೂಲ್ ಬಳಿ ಹಾಟ್ ಅವತಾರದಲ್ಲಿ ಕುಳಿತಿರುವ ಕೆಲವೊಂದು ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
![ದುಬೈನಲ್ಲಿದ್ದುಕೊಂಡು ಹಾಟ್ ಫೋಟೋಗಳ ಮೂಲಕ ಹುಡುಗರ ಎದೆಬಡಿತ ಹೆಚ್ಚಿಸಿದ ನಟಿ Mouni roy hot look](https://etvbharatimages.akamaized.net/etvbharat/prod-images/768-512-7917948-578-7917948-1594040768216.jpg)
ಸದ್ಯಕ್ಕೆ ಬಾಲಿವುಡ್ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಶೂಟಿಂಗ್ಗಳು ಬಂದ್ ಆಗಿವೆ. ಎಲ್ಲಕ್ಕಿಂತ ಇಡೀ ದೇಶದಲ್ಲೇ ಹೆಚ್ಚಾಗಿ ಮುಂಬೈನಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಈ ಕಾರಣದಿಂದ ಸದ್ಯಕ್ಕೆ ಮೌನಿ ರಾಯ್ ಮುಂಬೈ ತೊರೆದು ದುಬೈನ ಅಬುದಾಬಿ ಸೇರಿದ್ದಾರೆ. ಕಳೆದ ತಿಂಗಳೇ ಈ ಹಾಟ್ ಗರ್ಲ್ ದುಬೈಗೆ ತೆರಳಿ ತಂಗಿಯೊಂದಿಗೆ ನೆಲೆಸಿದ್ದಾರೆ. ಕೊರೊನಾ ಭೀತಿ ಕಡಿಮೆ ಆಗಿ ಬಾಲಿವುಡ್ ಕೆಲಸಗಳು ಮೊದಲಿನಂತೆ ಆರಂಭವಾಗುವವರೆಗೂ ದುಬೈನಲ್ಲೇ ಇರುತ್ತಾರಂತೆ.
ಇನ್ನು ಆಗ್ಗಾಗ್ಗೆ ತಮ್ಮ ಹಾಟ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಮೌನಿರಾಯ್ ಮತ್ತೆ ಕೆಲವೊಂದು ಫೋಟೋಗಳನ್ನು ಹಾಕಿದ್ದಾರೆ. ಸ್ವಿಮ್ಮಿಂಗ್ ಪೂಲ್ ಬಳಿ ಸ್ವಿಮ್ ಸೂಟ್ನಲ್ಲಿ ಕುಳಿತಿರುವ ಕೆಲವೊಂದು ಪೋಟೋಗಳನ್ನು ಮೌನಿ ರಾಯ್ ತಮ್ಮ ಅಭಿಮಾನಿಗಳೊಂದಿಗೆ ಷೇರ್ ಮಾಡಿಕೊಂಡಿದ್ದು ಮೌನಿ ರಾಯ್ ಹಾಟ್ ಲುಕ್ಗೆ ಹುಡುಗರು ಫಿದಾ ಆಗಿದ್ದಾರೆ. ವಿಧ ವಿಧವಾಗಿ ಕಮೆಂಟ್ಗಳನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಮೌನಿರಾಯ್ ದುಬೈನಲ್ಲಿ ಕುಳಿತುಕೊಂಡು ಇಲ್ಲಿ ಹುಡುಗರ ಎದೆಬಡಿತ ಹೆಚ್ಚಿಸುತ್ತಿದ್ದಾರೆ.