ಕಳೆದ ವರ್ಷ ಅನೇಕ ಸೆಲಬ್ರಿಟಿಗಳು ಸಪ್ತಪದಿ ತುಳಿದಿದ್ದರು. ಇದೇ ವರ್ಷ ಫೆಬ್ರವರಿ 14 ರಂದು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕೂಡಾ ಹಸೆಮಣೆ ಏರುತ್ತಿದ್ದಾರೆ. ಬಾಲಿವುಡ್ ನಟಿ ಮೌನಿ ರಾಯ್ ಕೂಡಾ ಶೀಘ್ರದಲ್ಲೇ ಮದುವೆ ಆಗುತ್ತಿದ್ದಾರಂತೆ. ಈ ಬಗ್ಗೆ ಮೌನಿ ರಾಯ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತಮಿಳು ಕುಟುಂಬದ ಹುಡುಗನನ್ನು ಮದುವೆಯಾಗಲಿದ್ದಾರಂತೆ ನಾಗಿಣಿ..! - Banker Suraj Nambiyaar
'ನಾಗಿಣಿ' ಖ್ಯಾತಿಯ ಮೌನಿರಾಯ್ ತಮಿಳು ಕುಟುಂಬಕ್ಕೆ ಸೇರಿದ ಸೂರಜ್ ನಂಬಿಯಾರ್ ಎಂಬುವವರನ್ನು ಮದುವೆಯಾಗಲಿದ್ದಾರಂತೆ. ಲಾಕ್ಡೌನ್ ಸಮಯದಲ್ಲಿ ದುಬೈನಲ್ಲಿ ತಂಗಿದ್ದ ವೇಳೆ ಮೌನಿರಾಯ್ಗೆ ಸೂರಜ್ ಪರಿಚಯವಾಗಿರಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ:ನಟನಾಗಿ ರೊಮ್ಯಾನ್ಸ್ ಮಾಡಿದ ಗಾಯಕ ಸಂಜಿತ್ ಹೆಗ್ಡೆ!
ದುಬೈಗೆ ಸೇರಿದ ಬ್ಯಾಂಕರ್ ಸೂರಜ್ ನಂಬಿಯಾರ್ ಎಂಬುವವರನ್ನು ಮೌನಿರಾಯ್ ವರಿಸಲಿದ್ದಾರಂತೆ. ಲಾಕ್ಡೌನ್ ಸಮಯದಲ್ಲಿ ದುಬೈನಲ್ಲಿ ಸುಮಾರು 4-5 ತಿಂಗಳು ಸ್ನೇಹಿತೆಯ ಮನೆಯಲ್ಲೇ ಮೌನಿರಾಯ್ ಉಳಿದುಕೊಂಡಿದ್ದರು. ಆ ಸಮಯದಲ್ಲೇ ಬಹುಶ: ಮೌನಿರಾಯ್ಗೆ ಅವರ ಡ್ರೀಮ್ ಬಾಯ್ ಪರಿಯವಾಗಿರಬಹುದು ಎಂದು ನೆಟಿಜನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಸೂರಜ್ ಕುಟುಂಬದವರಿಗೂ ಮೌನಿರಾಯ್ಗೂ ಉತ್ತಮ ಸಂಬಂಧವಿದೆಯಂತೆ. ದುಬೈನಲ್ಲಿ ಇದ್ದಾಗ ಸೂರಜ್ ಕುಟುಂಬದೊಂದಿಗೆ ಕೂಡಾ ಮೌನಿ ಕಾಲ ಕಳೆದಿದ್ದಾರಂತೆ. ಮೌನಿರಾಯ್ ಕಿರುತೆರೆಯ 'ನಾಗಿಣಿ' ಪಾತ್ರದ ಮೂಲಕ ಫೇಮಸ್ ಆದವರು. ನಂತರ 'ಕೆಜಿಎಫ್ 1' ರಲ್ಲಿ ಗಲಿ ಗಲಿ ಮೇ...ಹಾಡಿನಲ್ಲಿ ಯಶ್ ಜೊತೆ ಹೆಜ್ಜೆ ಹಾಕಿದ್ದರು. ಪ್ರಸ್ತುತ ರಣಬೀರ್ ಕಪೂರ್ ಹೀರೋ ಆಗಿ ನಟಿಸುತ್ತಿರುವ ಬ್ರಹ್ಮಾಸ್ತ್ರ ಚಿತ್ರದಲ್ಲಿ ದಮಯಂತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.